Pramoda Devi Wadiyar: ರಾಜಮಾತೆ ಪ್ರಮೋದಾ ದೇವಿ ಜತೆ ವಿಶೇಷ ಸಂದರ್ಶನ

Pramoda Devi Wadiyar: ರಾಜಮಾತೆ ಪ್ರಮೋದಾದೇವಿಯವರೊಂದಿಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವಿಶೇಷ ಸಂದರ್ಶನ ಇಲ್ಲಿದೆ

First Published Oct 4, 2022, 6:55 PM IST | Last Updated Oct 4, 2022, 6:55 PM IST

ಮೈಸೂರು (ಅ. 04): ವಿಶ್ವವಿಖ್ಯಾತ ದಸರಾ ಮಹೋತ್ಸವ (Dasara Festival) ಮೈಸೂರು ಅರಮನೆಯಲ್ಲಿ ರಾಜವಂಶಸ್ಥರ ಖಾಸಗಿ ದರ್ಬಾರ್‌ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಆರಂಭಗೊಂಡಿದ್ದು, ಅರಮನೆಯಲ್ಲಿ ಮಹಾರಾಜರ ಗತಕಾಲದ ವೈಭವವು ಸೃಷ್ಟಿಯಾಗಿದೆ. ಈ ಬಾರಿಯ ಮೈಸೂರು ದಸರಾ ವೀಕ್ಷಿಸಲು ದೇಶ ವಿದೇಶಗಳಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ಇನ್ನು ಈ ಬಾರಿಯ ಮೈಸೂರು ದಸರಾ ಕಾರ್ಯಕ್ರಮವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಿರುವುದು ವಿಶೇಷ. ಸಾಂಸ್ಕೃತಿಕ ನಗರಿ ಮೈಸೂರಿನ ಘನತೆ, ಗಾಂಭಿರ್ಯ ಹೆಚ್ಚಾಗುವುದು ನವರಾತ್ರಿ ವೇಳೆಯಲ್ಲಿ. ಇವೆಲ್ಲವನ್ನೂ ಕೊಡುಗೆಯಾಗಿ ನೀಡಿದ್ದು ಮೈಸೂರು ಅರಸರು. 

ಯದುರಾಯರಿಂದ ಹಿಡಿದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹಾಗೂ ಈಗಿನ ರಾಜ ಯದುವೀರರವರೆಗೆ, ಮೈಸೈರು ಅರಸರು ಸಾಂಸ್ಕೃತಿಕ ನಗರಿಯ ಮೆರಗನ್ನು ಹೆಚ್ಚಿಸುತ್ತಲೇ ಬಂದಿದ್ದಾರೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕಾಲವಾದ ಬಳಿಕವೂ ಈ ಪರಂಪರೆ, ಘನತೆಯನ್ನು ಬೆಳಸಿಕೊಂಡು ಬಂದಿರುವಂತಹ ದಿಟ್ಟ ಶಕ್ತಿ ರಾಜಮಾತೆ ಪ್ರಮೋದಾದೇವಿ ಒಡೆಯರ್‌. ರಾಜಮಾತೆ ಪ್ರಮೋದಾದೇವಿಯವರೊಂದಿಗೆ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವಿಶೇಷ ಸಂದರ್ಶನ ಇಲ್ಲಿದೆ

ಆಯುಧ ಪೂಜೆ ವಿಶೇಷ; ನೋಡ ಬನ್ನಿ ಮೈಸೂರು ರಾಜರ ದಸರಾ ವೈಭವ