Asianet Suvarna News Asianet Suvarna News

ದರ್ಶನ್ ಥಳಿಸಿಲ್ಲ ಎಂದ ಗಂಗಾಧರ್, ಹಲ್ಲೆ ನಡೆದಿದ್ದು ನಿಜವೆಂದ ಹೊಟೇಲ್ ಸಿಬ್ಬಂದಿ.!

Jul 17, 2021, 11:15 AM IST

ಬೆಂಗಳೂರು (ಜು. 17): ಚಿತ್ರನಟ ದರ್ಶನ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವನ್ನು ಸಂದೇಶ್ ದಿ ಪ್ರಿನ್ಸ್ ಹೊಟೇಲ್ ನೌಕರ ಗಂಗಾಧರ್ ಅಲ್ಲಗಳೆದಿದ್ದಾರೆ. ಆದರೆ ಅಲ್ಲಿನ ಸಿಬ್ಬಂದಿ ಮಾತ್ರ ಹಲ್ಲೆ ನಡೆದಿದ್ದು ನಿಜ ಅಂತಿದ್ದಾರೆ. ' ದರ್ಶನ್ ಹೊಟೇಲ್‌ಗೆ ಬಂದಾಗ ಗಂಗಾಧರ್ ಸರ್ವೀಸ್ ಮಾಡುತ್ತಿದ್ದರು. ಯಾವುದೋ ಒಂದು ಐಟಂ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ದರ್ಶನ್‌ ಕೋಪಗೊಂಡು ಹಲ್ಲೆ ನಡೆಸಿದ್ದಾರೆ ಎಂದು ಸಿಬ್ಬಂದಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಹೇಳಿಕೆ ಕೊಟ್ಟಿದ್ದಾರೆ. ಇಷ್ಟೇ ಅಲ್ಲ ಹೊಟೇಲ್‌ನ ಸೆಕ್ಯೂರಿಟಿ, ರಿಸೆಪ್ಷನ್ ಹುಡುಗನಿಗೂ ಬೈದಿದ್ದಾರೆ ಎನ್ನಲಾಗಿದೆ. 

ದರ್ಶನ್ ಪ್ರಕರಣದಲ್ಲಿ ಆಡಿಯೋ- ವಿಡಿಯೋ ಸ್ಫೊಟ!