ಇಂಧನ ಖಾತೆ ಸಿಕ್ಕಿದ್ದಕ್ಕೆ ಸುನೀಲ್ ಕುಮಾರ್ ಖುಷ್, ಕೆಲಸ ಮಾಡಲು ಫುಲ್ ಜೋಷ್..!

- ಕಾರ್ಕಳ ಶಾಸಕ ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವರಾಗಿ ನಿಯುಕ್ತಿ
- ಬಹಳ ದೊಡ್ಡ ಜವಾಬ್ದಾರಿಯನ್ನು ಮುಖ್ಯಮಂತ್ರಿ ನನಗೆ ಕೊಟ್ಟಿದ್ದಾರೆ.
- ಪಕ್ಷ ನನಗೆ ಸಚಿವನ ಜವಾಬ್ದಾರಿ ನೀಡಿತ್ತು. ಈಗ ಮತ್ತಷ್ಟು ಹೊಣೆ ಹೆಚ್ಚಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಆ. 07): ಬೊಮ್ಮಾಯಿ ಸಂಪುಟ 29 ನೂತನ ಸಚಿವರ ಖಾತೆ ಹಂಚಿಕೆಯಾಗಿದೆ. ಕಾರ್ಕಳ ಶಾಸಕ ಸುನೀಲ್ ಕುಮಾರ್‌ಗೆ ಇಂಧನ ಮತ್ತು ಕನ್ನಡ ಸಂಸ್ಕೃತಿ ಖಾತೆ ನೀಡಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಳೆದು ತೂಗಿ ಕರ್ನಾಟಕ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಇಲಾಖೆ? ಇಲ್ಲಿದೆ ಪಟ್ಟಿ

'ಬಹಳ ದೊಡ್ಡ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳು ನನಗೆ ಕೊಟ್ಟಿದ್ದಾರೆ. ಪಕ್ಷ ನನಗೆ ಸಚಿವನ ಜವಾಬ್ದಾರಿ ನೀಡಿತ್ತು. ಈಗ ಮತ್ತಷ್ಟು ಹೊಣೆ ಹೆಚ್ಚಿದೆ. ಯಡಿಯೂರಪ್ಪನವರು, ಡಿಕೆಶಿ, ಶೋಭಾ ಕರಂದ್ಲಾಜೆ ನಿರ್ವಹಿಸಿದ ಖಾತೆ ಇದು. ಈ ಜವಾಬ್ದಾರಿಯನ್ನು ಸಮರ್ಪಕವಾಗಿ, ಹೊಸತನದೊಂದಿಗೆ ನಿರ್ವಹಿಸುತ್ತೇನೆ. ಇಲಾಖೆಯ ತಜ್ಞರು ಮತ್ತು ಹಿರಿಯರ ಸಲಹೆ-ಸೂಚನೆ ಪಡೆಯುತ್ತೇನೆ. ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದ ನೂತನ ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

Related Video