Asianet Suvarna News Asianet Suvarna News

ಅಳೆದು ತೂಗಿ ಕರ್ನಾಟಕ ಸಚಿವರಿಗೆ ಖಾತೆ ಹಂಚಿಕೆ: ಯಾರಿಗೆ ಯಾವ ಇಲಾಖೆ? ಇಲ್ಲಿದೆ ಪಟ್ಟಿ

* ಬೊಮ್ಮಾಯಿ ಸಂಪುಟದ 29 ಸಚಿವರಿಗೆ ಖಾತೆ ಹಂಚಿಕೆ

* ಅನುಮೋದನೆ ಕೊಟ್ಟ ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋಟ್

* ಹೊಸಬರಿಗೆ ಪ್ರಮುಖ ಖಾತೆ

* ಮಹತ್ವದ ಖಾತೆ ಉಳಿಸಿಕೊಂಡ ಸಿಎಂ ಬೊಮ್ಮಾಯಿ

 

Karnataka Cabinet Expansion Basavaraj Bommai Allocates Portfolios To 29 New Ministers pod
Author
Bangalore, First Published Aug 7, 2021, 11:37 AM IST

ಬೆಂಗಳೂರು(ಆ.07): ಭಾರೀ ಕುತೂಹಲ ಮೂಡಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಂಪುಟದ ಸಚಿವರಿಗೆ ಖಾತೆಗಳ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. 29 ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಗ್ರೀನ್‌ ಸಿಗ್ನಲ್ ಕೊಟ್ಟಿದ್ದಾರೆ. 

ಇನ್ನು ಈ ಬೊಮ್ಮಾಯಿ ಸಂಪುಟದಲ್ಲಿ ಮೊದಲ ಬಾರಿ ಸಚಿವರಾದವರಿಗೆ ಪ್ರಭಾವಿ ಖಾತೆ ನೀಡಿದ್ದರೆ, ಸಚಿವೆ ಶಶಿಕಲಾ ಜೊಲ್ಲೆಗೆ ಮುಜರಾಯಿ, ಹಜ್ ಇಲಾಖೆ ಜವಾಬ್ದಾರಿ ವಹಿಸಿರುವುದು ಮತ್ತೊಂದು ಪ್ರಮುಖ ಬದಲಾವಣೆಯಾಗಿದೆ.

"

ಜಿಲ್ಲೆಗಳಿಗೆ ನೂತನ ಸಚಿವರ ದೌಡು!

ಯಾರಿಗೆ ಯಾವ ಖಾತೆ?

* ಗೋವಿಂದ ಕಾರಜೋಳ: ಜಲಸಂಪನ್ಮೂಲ ಖಾತೆ

* ಕೆ.ಎಸ್.ಈಶ್ವರಪ್ಪ: ಗ್ರಾಮೀಣ ಅಭಿವೃದ್ಧಿ

* ಆರ್‌. ಅಶೋಕ್: ಕಂದಾಯ ಇಲಾಖೆ

* ಶ್ರೀರಾಮುಲು: ಸಾರಿಗೆ ಖಾತೆ

* ವಿ. ಸೋಮಣ್ಣ: ವಸತಿ, ಮೂಲಭೂತ ಅಭಿವೃದ್ಧಿ ಖಾತೆ

* ಉಮೇಶ್ ಕತ್ತಿ: ಅರಣ್ಯ ಹಾಗೂ ಆಹಾರ

* ಎಸ್‌. ಅಂಗಾರ: ಮೀನುಗಾರಿಕೆ

* ಜೆ. ಸಿ. ಮಾಧುಸ್ವಾಮಿ: ಸಣ್ಣ ನೀರಾವರಿ, ಕಾನೂನು ಸಂಸದೀಯ ವ್ಯವಹಾರ

* ಅರಗಜ್ಞಾನೇಂದ್ರ: ಗೃಹ ಇಲಾಖೆ

* ಡಾ. ಅಶ್ವತ್ಥ್ ನಾರಾಯಣ್: ಉನ್ನತ ಶಿಕ್ಷಣ ಸಚಿವ, ಐಟಿಬಿಟಿ

* ಸಿ. ಸಿ. ಪಾಟೀಲ್: ಲೋಕೋಪಯೋಗಿ ಇಲಾಖೆ

* ಆನಂದ್ ಸಿಂಗ್: ಪರಿಸರ, ಪ್ರವಾಸೋದ್ಯಮ ಖಾತೆ

* ಕೋಟಾ ಶ್ರೀನಿವಾಸ ಪೂಜಾರಿ: ಸಮಾಜ ಕಲ್ಯಾಣ, ಹಿಂದುಳಿದ ವರ್ಗ

* ಪ್ರಭು ಚೌಹಾಣ್: ಪಶು ಸಂಗೋಪನೆ

* ಮುರುಗೇಶ್ ನಿರಾಣಿ: ಬೃಹತ್ ಕೈಗಾರಿಕೆ

* ಶಿವರಾಮ್ ಹೆಬ್ಬಾರ್: ಕಾರ್ಮಿಕ ಇಲಾಖೆ

* ಎಸ್‌. ಟಿ. ಸೋಮಶೇಖರ್: ಸಹಕಾರ ಖಾತೆ

* ಬಿ. ಸಿ. ಪಾಟೀಲ್: ಕೃಷಿ ಖಾತೆ

* ಭೈರತಿ ಬಸವರಾಜ್: ನಗರಾಭಿವೃದ್ಧಿ

* ಡಾ. ಕೆ. ಸುಧಾಕರ್: ಆರೋಗ್ಯ, ವೈದ್ಯಕೀಯ ಶಿಕ್ಷಣ ಖಾತೆ

* ಗೋಪಾಲಯ್ಯ: ಅಬಕಾರಿ ಖಾತೆ

* ಶಶಿಕಲಾ ಜೊಲ್ಲೆ: ಮುಜರಾಯಿ, ಹಜ್, ವಕ್ಫ್ ಖಾತೆ

* ಎಂಟಿಬಿ ನಾಗರಾಜ್: ಪೌರಾಡಳಿತ ಖಾತೆ

* ನಾರಾಯಣಗೌಡ: ರೇಷ್ಮೆ, ಕ್ರೀಡೆ, ಯುವ ಸಬಲೀಕರಣ

* ಬಿ. ಸಿ. ನಾಗೇಶ್: ಶಿಕ್ಷಣ ಇಲಾಖೆ

* ಸುನಿಲ್ ಕುಮಾರ್: ಇಂಧನ, ಕನ್ನಡ, ಸಂಸ್ಕೃತಿ ಇಲಾಖೆ

* ಹಾಲಪ್ಪ ಆಚಾರ್: ಗಣಿ, ಭೂ ವಿಜ್ಞಾನ, ಮಹಿಳಾ- ಮಕ್ಕಳ ಕಲ್ಯಾಣ

* ಶಂಕರ್ ಪಾಟೀಲ್ ಮುನೇನಕೊಪ್ಪ: ಜವಳಿ, ಸಕ್ಕರೆ ಖಾತೆ

* ಮುನಿರತ್ನ: ತೋಟಗಾರಿಕೆ ಇಲಾಖೆ, ಯೋಜನೆ, ಅಲ್ಪಸಂಖ್ಯಾತ ಕಲ್ಯಾಣ, ಸಾಂಖಿಕ

ನನ್ನ ನೋಡಲು ಬರುವವರು ಒಂದು ಕನ್ನಡ ಪುಸ್ತಕ ತನ್ನಿ : ಸಚಿವ ಸುನಿಲ್ ಕುಮಾರ್

ಕೆಲವು ಸಣ್ಣಪುಟ್ಟ ಬದಲಾವಣೆಗಳನ್ನು ಹೊರತುಪಡಿಸಿದರೆ ಬಹುತೇಕ ಹಿಂದಿನ ಯಡಿಯೂರಪ್ಪ ಸರ್ಕಾರದಲ್ಲಿದ್ದ ಸಚಿವರಿಗೆ ಅದೇ ಖಾತೆಗಳನ್ನೇ ನೀಡಲಾಗಿದೆ. 

Follow Us:
Download App:
  • android
  • ios