Dharwad: ಶ್ರೀರಾಮಸೇನೆ ಕಾರ್ಯಕರ್ತರಿಂದ ದೇವಸ್ಥಾನದ ಬಳಿಯಿದ್ದ ಮುಸ್ಲಿಂ ಅಂಗಡಿಗಳು ಧ್ವಂಸ

ಧಾರವಾಡದ ಪ್ರತಿಷ್ಠಿತ ನುಗ್ಗಿಕೇರಿ ಹನುಮಂತನ ದೇವಸ್ಥಾನದ ಆವರಣದಲ್ಲಿನ ನಾಲ್ಕು ಮುಸ್ಲಿಂ ಅಂಗಡಿಗಳನ್ನು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಅಕ್ಷಕಶಃ ಧ್ವಂಸ ಮಾಡಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.
 

Share this Video
  • FB
  • Linkdin
  • Whatsapp

ಧಾರವಾಡ (ಏ. 10): ದೇವಸ್ಥಾನದ ಆವರಣದಲ್ಲಿರುವ ಹಿಂದೂಯೇತರ ಅಂಗಡಿಗಳನ್ನು ತೆರವುಗೊಳಿಸುವ ಅಭಿಯಾನ ಇದೀಗ ಧಾರವಾಡದಲ್ಲಿ ತೀವ್ರ ಬಿಸಿ ಪಡೆದುಕೊಂಡಿದ್ದು, ಇಲ್ಲಿಯ ಪ್ರತಿಷ್ಠಿತ ನುಗ್ಗಿಕೇರಿ ಹನುಮಂತನ ದೇವಸ್ಥಾನದ ಆವರಣದಲ್ಲಿನ ನಾಲ್ಕು ಮುಸ್ಲಿಂ ಅಂಗಡಿಗಳನ್ನು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಅಕ್ಷಕಶಃ ಧ್ವಂಸ ಮಾಡಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.

ಮುಸ್ಲಿಂ ಅಂಗಡಿಗಳ ತೆರವು ಹೀನ ಕೃತ್ಯ, ಸರ್ಕಾರ ಕ್ರಮ ಕೈಗೊಳ್ಳಬೇಕು: ಎಚ್‌ಡಿಕೆ ಒತ್ತಾಯ

ನಾಲ್ಕು ಅಂಗಡಿಗಳನ್ನು ತೆರವುಗೊಳಿಸಿರುವ ಶ್ರೀರಾಮ ಸೇನೆ ಕಾರ‍್ಯಕರ್ತರು ಈ ಮೂಲಕ ಕಾನೂನು ಕೈಗೆತ್ತಿಕೊಂಡಿದ್ದಾರೆ. ಕಳೆದ ಒಂದು ತಿಂಗಳಿಂದ ರಾಜ್ಯದ ಹಲವೆಡೆ ದೇವಸ್ಥಾನದ ಆವರಣದಲ್ಲಿ ಇರುವ ಹಿಂದೂಯೇತರ ಅಂಗಡಿಗಳಿಗೆ ತೆರವುಗೊಳಿಸುವ ಚರ್ಚೆ ನಡೆಯುತ್ತಲೇ ಇದೆ. ಮನವಿ ಕೊಡುವುದು, ಒತ್ತಾಯಿಸುವುದು, ಪ್ರತಿಭಟನೆ ಅಷ್ಟಕ್ಕೇ ಈ ಅಭಿಯಾನ ಇಲ್ಲಿಯ ವರೆಗೆ ಸೀಮಿತವಾಗಿತ್ತು. ಇದೀಗ ಧಾರವಾಡದ ನುಗ್ಗಿಕೇರಿಯಲ್ಲಿ ಅಂಗಡಿಗಳನ್ನು ಎತ್ತಿ ಹಾಕಲಾಗಿದ್ದು, ಅದರಲ್ಲಿದ್ದ ಸಾಮಗ್ರಿಗಳನ್ನು ಬಿಸಾಡಿ ನಾಶಪಡಿಸಲಾಗಿದೆ.

ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿ ನಾಲ್ಕು ಹಿಂದೂಯೇತರ ಅಂಗಡಿಗಳಿದ್ದವು. ಕಳೆದ ವಾರವಷ್ಟೇ ಶ್ರೀರಾಮ ಸೇನೆಯ ಕಾರ್ಯಕರ್ತರು ಬಂದು ಪ್ರತಿಭಟನೆ ಮಾಡಿದ್ದರು. ಈ ದೇವಸ್ಥಾನದಲ್ಲಿನ ಹಿಂದೂಯೇತರ ಅಂಗಡಿಗಳನ್ನು ತೆರವು ಮಾಡಿ, ಇಲ್ಲದೇ ಹೋದಲ್ಲಿ ನಾವೇ ತೆರವುಗೊಳಿಸುತ್ತೇವೆ ಎಂದು ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ್ದ ಶ್ರೀರಾಮ ಸೇನೆ ಕಾರ‍್ಯಕರ್ತರು ಒಂದೇ ವಾರದಲ್ಲಿ ಮುಸ್ಲಿಂ ಸಮುದಾಯದ ಎರಡು ತೆಂಗಿನಕಾಯಿ ಹಾಗೂ ಎರಡು ಜ್ಯೂಸ್‌ ಅಂಗಡಿಗಳನ್ನು ಸ್ವತಃ ಹಣ್ಣು-ತೆಂಗಿನಕಾಯಿಗಳನ್ನು ಹೊರಗೆ ಚೆಲ್ಲುವ ಮೂಲಕ ತೆರವುಗೊಳಿಸಿದ್ದಾರೆ.

Related Video