
ಧರ್ಮಸ್ಥಳ ನೆಲದಲ್ಲಿ ಇಂದಾದರು ಪತ್ತೆಯಾಗಲಿದ್ಯಾ ಬುರುಡೆ ರಹಸ್ಯ? ಅಗೆದರೂ, ಬಗೆದರೂ ಸಿಗದ ಕಳೇಬರ!
ಧರ್ಮಸ್ಥಳದ ಅಸಹಜ ಸಾವು ಪ್ರಕರಣದಲ್ಲಿ ಎಸ್‌ಐಟಿಯಿಂದ ಶವಗಳಿಗಾಗಿ ಶೋಧ ಮುಂದುವರೆದಿದೆ. ನಿನ್ನೆ 8 ಅಡಿ ಅಗೆದರೂ ಶವ ಪತ್ತೆಯಾಗಿಲ್ಲ. ಶೋಧ ಕಾರ್ಯಾಚರಣೆಯ ಪ್ರತಿಕ್ಷಣವನ್ನು ಚಿತ್ರೀಕರಿಸಲಾಗಿದೆ. ನಿನ್ನೆ ಏನೆಲ್ಲಾ ಆಯ್ತು ಎಂಬುದರ ಸಂಪೂರ್ಣ ಡಿಟೇಲ್ ಇಲ್ಲಿದೆ.
ರಾಜ್ಯದಲ್ಲಿ ಭಾರಿ ಸುದ್ದಿ ಮಾಡುತ್ತಿರುವ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವು ಪ್ರಕರಣದಲ್ಲಿ ಇಂದು ಕೂಡ ಎಸ್‌ಐಟಿಯಿಂದ ಶವಗಳ ಕಳೇಬರಕ್ಕಾಗಿ ಶೋಧಕಾರ್ಯ ಮುಂದುವರೆದಿದೆ. ನಿನ್ನೆ ಗುರುತು ಮಾಡಿದ ಪ್ರದೇಶದಲ್ಲಿ 8 ಅಡಿವರೆಗೆ ಅಗೆದರು ಶವ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಕೂಡ ಶೋಧ ಮುಂದುವರೆದಿದೆ. ಇಲ್ಲಿ ಪ್ರತಿಕ್ಷಣವನ್ನು ಎಸ್‌ಐಟಿ ಚಿತ್ರೀಕರಿಸಿಕೊಂಡಿದ್ದು, ನಿನ್ನೆ ಏನೆಲ್ಲಾ ಆಯ್ತು ಎಂಬುದ ಡಿಟೇಲ್ ಸ್ಟೋರಿ ಈ ವೀಡಿಯೋದಲ್ಲಿದೆ ವೀಕ್ಷಿಸಿ.