ಕೊರೋನಾ 3 ನೇ ಅಲೆ ಭೀತಿ, ಲಾಕ್‌ಡೌನ್ ಬಗ್ಗೆ ಡಾ. ಸುಧಾಕರ್ ಮಾತು
- ಹೊಸ ವೈರಸ್ ಪತ್ತೆ-ತಜ್ಞರೊಂದಿಗೆ ಚರ್ಚೆ: ಸುಧಾಕರ್
-ರಷ್ಯಾ, ಬ್ರಿಟನ್, ಮಹಾರಾಷ್ಟ್ರದಲ್ಲಿ ಹೊಸ ತಳಿ ಪತ್ತೆ, ಗಮನಕ್ಕೆ ತರಲು ಸೂಚನೆ
ಬೆಂಗಳೂರು (ಅ. 29): ರಷ್ಯಾ, ಇಂಗ್ಲೆಂಡ್‌ಗಳಲ್ಲಿ ಮಾತ್ರವಲ್ಲದೆ ದೇಶದ ಮಧ್ಯಪ್ರದೇಶ, ಮಹಾರಾಷ್ಟ್ರದಲ್ಲೂ ಕೊರೋನಾದ ಹೊಸತಳಿ ಪತ್ತೆಯಾಗಿದೆ ಎಂದು ಹೇಳುತ್ತಿದ್ದು ಈ ಬಗ್ಗೆ ರಾಜ್ಯದ ಹಿರಿಯ ತಜ್ಞರು ಹಾಗೂ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಚರ್ಚೆ ನಡೆಸಿದ್ದೇವೆ. ಈ ರೀತಿ ಕಂಡು ಬಂದಲ್ಲಿ ಸರ್ಕಾರದ ಗಮನಕ್ಕೆ ತರಬೇಕೆಂದು ಸೂಚನೆಯನ್ನು ಸಹ ನೀಡಿದ್ದೇವೆ. ಮತ್ತೆ ಲಾಕ್‌ಡೌನ್ ಮಾಡುವ ಪ್ರಸ್ತಾಪವಿಲ್ಲ. ಜನ ಕೂಡಾ ಸರ್ಕಾರಕ್ಕೆ ಸಹಕರಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ತಿಳಿಸಿದ್ದಾರೆ.