
ಭೋವಿ ಅಭಿವೃದ್ಧಿ ನಿಗಮದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ, 2 ಕೋಟಿ ರೂ ಹಣ ಗುಳುಂ..!
ಭೋವಿ ಅಭಿವೃದ್ಧಿ ನಿಗಮದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವಾಗಿರುವ ಆರೋಪ ಕೇಳಿ ಬಂದಿದೆ. ಲೋನ್ ಹೆಸರಲ್ಲಿ ಫಲಾನುಭವಿಗಳಿಗೂ ಮಹಾವಂಚನೆ ಆಗಿದೆ. ಬರೋಬ್ಬರಿ 2 ಕೋಟಿಗೂ ಹೆಚ್ಚು ಹಣ ಕಂಡವರ ಪಾಲಾಗಿದೆ. ವಿಜಯಪುರ ತಾಲ್ಲೂಕು ಮದಬಾವಿ ಗ್ರಾಮದ ಜನರಿಗೆ ವಂಚನೆಯಾಗಿದೆ.
ಬೆಂಗಳೂರು (ಏ.01): ಭೋವಿ ಅಭಿವೃದ್ಧಿ ನಿಗಮದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವಾಗಿರುವ ಆರೋಪ ಕೇಳಿ ಬಂದಿದೆ. ಲೋನ್ ಹೆಸರಲ್ಲಿ ಫಲಾನುಭವಿಗಳಿಗೂ ಮಹಾವಂಚನೆ ಆಗಿದೆ. ಬರೋಬ್ಬರಿ 2 ಕೋಟಿಗೂ ಹೆಚ್ಚು ಹಣ ಕಂಡವರ ಪಾಲಾಗಿದೆ. ವಿಜಯಪುರ ತಾಲ್ಲೂಕು ಮದಬಾವಿ ಗ್ರಾಮದ ಜನರಿಗೆ ವಂಚನೆಯಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸಣ್ಣ ಉದ್ಯೋಗ, ಕಿರಾಣಿ ಅಂಗಡಿ, ಉದ್ಯಮ ಮಾಡಲು ಲೋನ್ ನೀಡಲಾಗುತ್ತದೆ. 30 ಫಲಾನುಭವಿಗಳಿಂದ ಖಾಲಿ ಚೆಕ್‌ಗೆ ಸಹಿ ಮಾಡಿಸಿಕೊಂಡು, ಕೊನೆಗೆ ತಲಾ 5 ಲಕ್ಷ, 10 ಜನರಿಗೆ ತಲಾ 10 ಲಕ್ಷ ಹಣವನ್ನು ಜಮಾ ಮಾಡಿದ್ದಾರೆ ಖದೀಮರು. ನಮಗೆ ನ್ಯಾಯ ಒದಗಿಸಿ ಎಂದು ಫಲಾನುಭವಿಗಳು ಒತ್ತಾಯಿಸಿದ್ದಾರೆ.