ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆಯಾದರೆ ಅನ್‌ಲಾಕ್ ಮಾಡಿ: ಸಿಎಂಗೆ ತಜ್ಞರ ಸಲಹೆ

- ನಿತ್ಯದ ಸೋಂಕಿನ ಪ್ರಮಾಣ 5000ದೊಳಗೆ ಬರಬೇಕು

- ಪಾಸಿಟಿವಿಟಿ ಶೇ.5, ಸಾವಿನ ದರ ಶೇ.1ಕ್ಕೆ ಇಳಿಯಬೇಕು

-ಸೋಂಕು ಹೆಚ್ಚಿರುವ ಕಡೆ ಇನ್ನಷ್ಟುಕಠಿಣ ಕ್ರಮ ಜಾರಿ

First Published Jun 1, 2021, 9:52 AM IST | Last Updated Jun 1, 2021, 9:52 AM IST

ಬೆಂಗಳೂರು (ಜೂ. 01): ಜೂ. 7 ರ ನಂತರ ಲಾಕ್‌ಡೌನ್ ವಿಸ್ತರಣೆಯಾಗುತ್ತಾ..? ಅನ್‌ಲಾಕ್ ಆಗುತ್ತಾ ಎಂಬ ಗೊಂದಲಕ್ಕೆ ಜೂ. 5 ರ ಸಿಎಂ ಸಭೆ ಬಳಿಕ ಉತ್ತರ ಸಿಗಲಿದೆ. 

ಆರ್ಥಿಕ ಪ್ಯಾಕೇಜ್‌ನಿಂದ ವಂಚಿತರಾದ ವರ್ಗಕ್ಕೆ 2 ನೇ ಪ್ಯಾಕೇಜ್ ಘೋಷನೆ ಸಾಧ್ಯತೆ!

ನಿತ್ಯದ ಸೋಂಕಿನ ಪ್ರಮಾಣ ಐದು ಸಾವಿರದೊಳಗೆ ಬರಬೇಕು. ಪಾಸಿಟಿವಿಟಿ ದರ ಶೇ. 5 ಮತ್ತು ಸಾವಿನ ದರ ಶೇ.1 ರ ಮಿತಿಯೊಳಗೆ ಬರಬೇಕು. ಇಷ್ಟಾಗುವವರೆಗೂ ರಾಜ್ಯದಲ್ಲಿ ಲಾಕ್‌ಡೌನ್‌ ಮುಂದುವರೆಯಬೇಕು. ಈ ಗುರಿ ಸಾಧನೆ ಜೂ.7ರೊಳಗೆ ಅಸಂಭವವಾದ ಕಾರಣ ಕನಿಷ್ಠ ಒಂದು ವಾರ ಲೌಕ್‌ಡೌನ್‌ ವಿಸ್ತರಿಸಿ. ಹೀಗೆಂದು ಕೊರೋನಾ ತಾಂತ್ರಿಕ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.