ಅಂತ್ಯಸಂಸ್ಕಾರ ತಂದ ಅವಾಂತರ, ಒಂದೇ ಗ್ರಾಮದ 128 ಮಂದಿಗೆ ಪಾಸಿಟಿವ್

- ಕೊರೊನಾ ನಿಯಮ ಉಲ್ಲಂಘಿಸಿ, ಅಂತ್ಯಸಂಸ್ಕಾರದಲ್ಲಿ ನೂರಾರು ಮಂದಿ ಭಾಗಿ

- ಚಿಕ್ಕಮಗಳೂರು, ಮುಳ್ಳಯ್ಯನ ಗಿರಿಯ ಇಂದಿರಾನಗರದ 128 ಮಂದಿಗೆ ಪಾಸಿಟಿವ್ 

- ಇಡೀ ಗ್ರಾಮಕ್ಕೆ ಗ್ರಾಮವೇ ಈಗ ಲಾಕ್..!

First Published May 18, 2021, 11:11 AM IST | Last Updated May 18, 2021, 11:27 AM IST

ಚಿಕ್ಕಮಗಳೂರು (ಮೇ. 18): ಕೊರೊನಾ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಎಷ್ಟೇ ಮನವಿ ಮಾಡಿದರೂ ನಿರ್ಲಕ್ಷಿಸುವವರೇ ಜಾಸ್ತಿ. ಈ ನಿರ್ಲಕ್ಷ್ಯದ ಪರಿಣಾಮ ಒಂದು ಗ್ರಾಮದ 128 ಜನರಿಗೆ ಪಾಸಿಟಿವ್ ಬಂದಿದೆ. ಅಂತ್ಯ ಸಂಸ್ಕಾರದಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರಿಂದ ಮುಳ್ಳಯ್ಯನಗಿರಿ ಸಮೀಪದ ಇಂದಿರಾ ನಗರವನ್ನು ಲಾಕ್‌ಡೌನ್ ಮಾಡಲಾಗಿದೆ. 

ಸೋಂಕಿತನಿಗೆ ಮರವೇ ಐಸೋಲೇಷನ್ ಸೆಂಟರ್, 11 ದಿನಗಳ ಮರ ವಾಸ..!