Asianet Suvarna News Asianet Suvarna News

ಜಾತಿ-ಜಾತಿಯನ್ನು ಒಡೆದು ಅಧಿಕಾರ ನಡೆಸಬೇಕು ಎಂಬುದೇ ಕಾಂಗ್ರೆಸ್‌ ಉದ್ದೇಶ: ಚಕ್ರವರ್ತಿ ಸೂಲಿಬೆಲೆ

ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ ಎಂಬ ಘೋಷವಾಕ್ಯಕ್ಕೆ ರಾಜ್ಯ ಸರ್ಕಾರ ಕತ್ತರಿ ಪ್ರಯೋಗ ಮಾಡಿದೆ. ಪ್ರಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.


ಶಿವಮೊಗ್ಗ: ಸರ್ಕಾರದ ನಿರ್ಧಾರದ ವಿರುದ್ಧ ಪ್ರಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ(Chakravarti sulibele) ಕಿಡಿಕಾರಿದ್ದಾರೆ. ರಾಷ್ಟ್ರಕವಿ ಕುವೆಂಪುರವರ(Kuvempu) ಘೋಷ ವಾಕ್ಯವನ್ನು ಬದಲಾವಣೆ ಮಾಡಿ ಅವರಿಗೆ ಅಪಮಾನ ಮಾಡಿದ್ದಾರೆ. ಹಿಂದುಳಿದ ದಲಿತ ವಿದ್ಯಾರ್ಥಿಗಳನ್ನು ಅಗ್ರೆಸ್ಸಿವ್ ಆಗಿ ಮಾಡಲಾಗುತ್ತಿದೆ. ಜ್ಞಾನ ದೇಗುಲದಲ್ಲಿ ವಿನಯದಿಂದ ಶಿಕ್ಷಕರನ್ನು ಗೌರವಿಸು ಎಂಬ ಅರ್ಥವಿದೆ. ಸರ್ವ ಜನಾಂಗದ ಶಾಂತಿಯ ತೋಟ ಎಂಬ ಕುವೆಂಪು ವಾಕ್ಯವನ್ನು ಬಳಸುತ್ತಿದ್ದ ಕಾಂಗ್ರೆಸ್ಸಿಗರು(Congress) ಇದೀಗ ಕುವೆಂಪುರವರಿಗೆ ಅಪಮಾನ ಮಾಡಿದ್ದಾರೆ. ಧೈರ್ಯವಾಗಿ ಪ್ರಶ್ನಿಸು ಎಂಬ ಬದಲಾವಣೆ ಮಾಡುವ ಕಾಂಗ್ರೆಸ್ ಸರ್ಕಾರ ಪ್ರಶ್ನಿಸಿದರೆ ಎಫ್ಐಆರ್ ದಾಖಲಿಸುತ್ತಾರೆ. ಪರೀಕ್ಷಾ ವೇಳಾಪಟ್ಟಿಯಲ್ಲಿ ಶುಕ್ರವಾರ ಮಧ್ಯಾಹ್ನ ಬದಲಾವಣೆ ಮಾಡಿದ್ದನ್ನು ಪ್ರಶ್ನಿಸಿದಕ್ಕೆ ನನ್ನ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಕಾಂಗ್ರೆಸ್ ಸರ್ಕಾರ (Congress government) ಬಂದ ನಂತರ ಎನ್ಇಪಿ ಶಿಕ್ಷಣ ವ್ಯವಸ್ಥೆ ಬದಲಾಯಿಸಿ ಎಸ್‌ಇಪಿ ತರಲಾಗಿದೆ. ಸರ್ಕಾರ ಹಲವು ವಿವಾದಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದು ಅದಕ್ಕೆ ಜನರು ತಿರುಗಿ ಬಿದ್ದ ಕೂಡಲೇ ಹಿಂಪಡೆಯುತ್ತಾರೆ. ಸರ್ಕಾರ ಮುಸ್ಲಿಮರ ತುಷ್ಟೀಕರಣದಲ್ಲಿ ತೊಡಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ವಿದ್ಯಾರ್ಥಿಗಳಲ್ಲಿ ಎಡಪಂಥೀಯ ಚಿಂತನೆಗಳನ್ನು ಬೆಳೆಸಲು ಯತ್ನಿಸಿದರು, ಬಲಪಂಥೀಯ ಚಿಂತನೆಗಳು ಹೆಚ್ಚಾಗುತ್ತಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  Narendra Modi: ಬಿಜೆಪಿ ದಿಗ್ವಿಜಯಕ್ಕೆ ಮೋದಿ ನೀಡಿದ ಸೂಚನೆ ಏನು..? ವಿಕಸಿತ ಭಾರತಕ್ಕೆ ಮೋದಿ ಸಂಕಲ್ಪ..!

Video Top Stories