Asianet Suvarna News Asianet Suvarna News

Narendra Modi: ಬಿಜೆಪಿ ದಿಗ್ವಿಜಯಕ್ಕೆ ಮೋದಿ ನೀಡಿದ ಸೂಚನೆ ಏನು..? ವಿಕಸಿತ ಭಾರತಕ್ಕೆ ಮೋದಿ ಸಂಕಲ್ಪ..!

ಕಾರ್ಯಕರ್ತರಿಗೆ ಮೋದಿ ನೀಡಿದ 100 ದಿನಗಳ ಸವಾಲು..!
ಆತಂಕವಾದವನ್ನ ಕಡಿಮೆ ಮಾಡಿದ್ದೇವೆ ಎಂದ ನಮೋ..!
ರಾಮ ಮಂದಿರದ ಯಶಸ್ಸು ಮೋದಿಗೆ ಎಂದ ಅಮಿತ್ ಶಾ..!

ಲೋಕಸಭೆ ಚುನಾವಣೆಗೆ ಪ್ರಧಾನಿ ಮೋದಿ(Narendra Modi), ಅಮಿತ್ ಶಾ, ಜೆ.ಪಿ.ನಡ್ಡಾ ನೇತೃತ್ವದ ಬಿಜೆಪಿ(BJP) ಚುನಾವಣಾ ಪ್ರಚಾರಕ್ಕೆ ರಣಕಹಳೆ ಮೊಳಗಿಸಿದೆ. ದೆಹಲಿಯ(Delhi) ಭಾರತ್ ಮಂಟಂಪಂನಲ್ಲಿ ಬಿಜೆಪಿ ರಾಷ್ಟ್ರೀಯ ಮಹಾ ಸಮಾವೇಶ ಶುರುವಾಗಿದೆ. ಮೋದಿ ಬಿಜೆಪಿ ಕಾರ್ಯಕರ್ತರಿಗೆ ಸಮರೋತ್ಸಾಹ ತುಂಬಿದ್ದಾರೆ. ಲೋಕಸಭಾ ಚುನಾವಣಾ(Loksabha) ದಿನಾಂಕ ಘೋಷಣೆ ಆಗದಿದ್ದರೂ ಕೂಡ ಎಲೆಕ್ಷನ್ ಬಿಸಿ ದಿನೇ ದಿನೇ ಏರ್ತಾನೆ ಇದೆ. ಮೋದಿ ಅನ್ನೋ ಸೋಲರಿಯದ ಸರದಾರ ಲೋಕಸಮರಕ್ಕೆ ಪಾಂಚಜನ್ಯ ಮೊಳಗಿಸಿದ್ದಾರೆ. ಬಿಜೆಪಿ ಕಾರ್ಯಕರ್ತರ ಸಮಾವೇಶದ ಮೂಲಕ ಲೋಕಸಭಾ ಚುನಾವಣೆಗೆ ಎಲ್ಲರನ್ನ ಸನ್ನದ್ಧರನ್ನಾಗಿದ್ದಾರೆ. ಇನ್ನು ಮುಂಬರುವ 100 ದಿನಗಳ ಟಾಸ್ಕ್‌ನನ್ನು ಮೋದಿ ಕಾರ್ಯಕರ್ತರಿಗೆ ನೀಡಿದರು. ಈಗಾಗಲೇ ಬಿಜೆಪಿಯ ಘೋಷವಾಕ್ಯವಾಗಿರುವ 400 ಗಡಿಯನ್ನ ದಾಟುವ ಸಾಧನೆ ಮಾಡೋಕೆ ಹುರಿದುಂಬಿಸಿ, ಏನು ಮಾಡಬೇಕು ಅನ್ನೋದನ್ನೂ ಹೇಳಿದ್ರು.

ಇದನ್ನೂ ವೀಕ್ಷಿಸಿ:  ತೆರಿಗೆ ತಾರತಮ್ಯ ಹೆಸರಲ್ಲಿ ಉತ್ತರ-ದಕ್ಷಿಣ ರಾಜಕೀಯ! ಮೋದಿ v/s ರಾಹುಲ್ ಕದನದಲ್ಲಿ ಯಾರು ಯಾರ ಕಡೆ ?

Video Top Stories