ತಮಿಳುನಾಡು ನೆಲದಿಂದಲೇ ಸುವರ್ಣನ್ಯೂಸ್ ಗ್ರೌಂಡ್ ರಿಪೋರ್ಟ್! 'ಕಾವೇರಿ' ಎಡವಿದ್ದೆಲ್ಲಿ?
ಶುಕ್ರವಾರ ಸುಪ್ರೀಂ ಕೋರ್ಟ್ನಲ್ಲಿ ಕಾವೇರಿ ವಿವಾದ ವಿಚಾರಣೆ
ಪ್ರಾಧಿಕಾರದ ಆದೇಶ ಪ್ರಶ್ನಿಸಲು ಕರ್ನಾಟಕ ಪರ ವಕೀಲರ ಸಿದ್ಧತೆ
ಇಂದು ದೆಹಲಿಯಲ್ಲಿ ಕಾನೂನು ತಜ್ಞರ ಜತೆ ಡಿಸಿಎಂ ಡಿಕೆಶಿ ಚರ್ಚೆ
ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಬಿಡಲು ಪ್ರಾಧಿಕಾರ ಸೂಚನೆ ನೀಡಿದ್ದು, ಕಾವೇರಿ(Cauvery) ನೀರು ಬಿಡುಗಡೆ ಆದೇಶದಿಂದ ರಾಜ್ಯಕ್ಕೆ ಸಂಕಷ್ಟ ಎದುರಾಗಿದೆ. ಮಂಗಳವಾರ ಮಧ್ಯರಾತ್ರಿಯಿಂದಲೇ ತಮಿಳುನಾಡಿಗೆ(Tamilnadu) ಕಾವೇರಿ ನೀರನ್ನು ಬಿಡಲಾಗುತ್ತಿದೆ. ಪ್ರಾಧಿಕಾರದ (cauvery authority)ಆದೇಶದಂತೆ ತಮಿಳುನಾಡಿಗೆ ರಾಜ್ಯ ಸರ್ಕಾರ ನೀರನ್ನು ಬಿಟ್ಟಿದೆ. ಕಾವೇರಿ ಜಲಾನಯನ ಪ್ರದೇಶಗಳ ಅಣೆಕಟ್ಟುಗಳಲ್ಲಿ ನೀರಿನ ಕೊರತೆ ಇದ್ದು, ಕೇವಲ ಅಣೆಕಟ್ಟುಗಳಲ್ಲಿ 54 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಇದನ್ನು ಖಂಡಿಸಿ ರೈತರು ಆಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಕಾಲುವೆಗಳಿಗೆ ನೀರು ಹರಿಸದಿದ್ರೆ ಮಂಡ್ಯ ರೈತರಿಗೆ (Farmers) ಕಂಟಕ ಎದುರಾಗಲಿದೆ. ನಾಲೆಗಳಿಗೆ ನೀರು ಬಿಡದಿದ್ರೆ ಕಬ್ಬು, ಭತ್ತದ ಒಣಗುವ ಆತಂಕ ಇದೆ. ಹಾಗಾಗಿ ತಮಿಳುನಾಡಿಗೆ ನೀರು ಹರಿಸದಂತೆ ಮಂಡ್ಯ ರೈತರು ಬೀದಿಗಿಳಿದಿದ್ದಾರೆ.
ಇದನ್ನೂ ವೀಕ್ಷಿಸಿ: ಬಿಜೆಪಿ ಹೈವೋಲ್ಟೇಜ್ ಸಭೆ: ಬಿ.ಎಲ್.ಸಂತೋಷ್ ನೇತೃತ್ವದಲ್ಲಿ ಮೊದಲ ಬಾರಿಗೆ ಮೀಟಿಂಗ್