ಬಿಜೆಪಿ ಹೈವೋಲ್ಟೇಜ್ ಸಭೆ: ಬಿ.ಎಲ್.ಸಂತೋಷ್ ನೇತೃತ್ವದಲ್ಲಿ ಮೊದಲ ಬಾರಿಗೆ ಮೀಟಿಂಗ್
ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾಗಿದ್ದು ಹೇಗೆ..?
ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ್ದು ಯಾಕೆ..?
ಪಾರ್ಟಿಯಲ್ಲಿನ ಹೊಂದಾಣಿಕೆ ರಾಜಕೀಯ ಆರೋಪ ನಿಜವಾ..?
ವಿಧಾನಸಭೆ ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಬಿಜೆಪಿ(BJP) ಹೈವೋಲ್ಟೇಜ್ ಸಭೆ ನಡೆಸುತ್ತಿದೆ. ಈ ಸಭೆಗೆ ಹಾಲಿ-ಮಾಜಿ ಶಾಸಕರು, ಸಂಸದರು, ಪರಾಜಿತರಿಗೆ ಆಹ್ವಾನ ನೀಡಲಾಗಿದೆ. ಬಿ.ಎಲ್. ಸಂತೋಷ್ ( BL Santosh) ನೇತೃತ್ವದ ಸಭೆಗೆ 224 ಮಂದಿಗೆ ಆಹ್ವಾನ ನೀಡಲಾಗಿದೆ. ವಿಧಾನಸಭೆ ಸೋಲು, ಲೋಕಸಭೆ ರಣತಂತ್ರ, ಕಾಂಗ್ರೆಸ್(Congress) ಆಪರೇಷನ್ ಸೇರಿದಂತೆ ಮಹತ್ವದ ವಿಚಾರಗಳ ಜೊತೆಗೆ ವೋಟರ್ ಲಿಸ್ಟ್ ಎನ್ ರೋಲ್ಮೆಂಟ್ ಚರ್ಚೆ ಸಹ ನಡೆಯಲಿದೆ ಎನ್ನಲಾಗ್ತಿದೆ. ಶಿವಮೊಗ್ಗ ಕಾರ್ಯಕ್ರಮ ನಿಮಿತ್ತ ಈ ಸಭೆಯಲ್ಲಿ ಬಿಎಸ್ ಯಡಿಯೂರಪ್ಪ ಭಾಗಿಯಾಗುತ್ತಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್, ಸಂ.ಕಾರ್ಯದರ್ಶಿ ರಾಜೇಶ್, ಪ್ರಧಾನ ಕಾರ್ಯದರ್ಶಿಗಳು ಇಂದಿನ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ವೀಕ್ಷಿಸಿ: ಭರದಿಂದ ಸಾಗ್ತಿದೆ ‘ಇಸ್ರೋ’ಸಂಶೋಧನಾ ಕಾರ್ಯ: ಚಂದ್ರನಲ್ಲಿ ಗಂಧಕ, ಆಮ್ಲಜನಕ ಪತ್ತೆ ಹಚ್ಚಿದ ರೋವರ್