ದಳಪತಿಯ "ಬ್ರಾಹ್ಮಣ ಸಿಎಂ" ಬಾಣಕ್ಕೆ "ಶಾ" ತಿರುಗುಬಾಣ! ಬೊಮ್ಮಾಯಿನೇ ಬಾದ್'ಶಾ' ಇದು ಶಾ ಶಾಸನ!

"ಬ್ರಾಹ್ಮಣ ಸಿಎಂ" ಯುದ್ಧಕ್ಕೆ ತೆರೆ ಎಳೆದರಾ ಕೇಸರಿ ಚಾಣಕ್ಯ. ಮತ್ತೆ ಬೊಮ್ಮಾಯಿನೇ "ಸಿಎಂ" ಅನ್ನೋ ಸುಳಿವು ಕೊಟ್ಟರಾ ಅಮಿತ್ ಶಾ. ಬ್ರಾಹ್ಮಣ ಸಿಎಂ ಬಾಂಬ್‌ಗೆ ಕೌಂಟರ್ ಕೊಟ್ಟರಾ ಬಿಜೆಪಿ ಬಾದ್"ಶಾ"? ಎರಡು ವರ್ಷಗಳ ಹಿಂದೆಯೇ  ಬೊಮ್ಮಾಯಿ ಪರ ಬ್ಯಾಟ್ ಬೀಸಿದ್ದರು ಶಾ..!

Share this Video
  • FB
  • Linkdin
  • Whatsapp

ಬೊಮ್ಮಾಯಿಗೆ ಆನೆ ಬಲ ತಂದುಕೊಟ್ಟ ಅಮಿತ್ ಶಾ ಕರ್ನಾಟಕ ಕುರುಕ್ಷೇತ್ರದಲ್ಲಿ ಮತ್ತೊಮ್ಮೆ ಕೇಸರಿ ರಣಕಹಳೆ ಮೊಳಗಿಸಿದ್ದಾರೆ. ಕರಾವಳಿಯಲ್ಲಿ ನಿಂತು ಕಾಂತಾರಾ ಸಿನಿಮಾ ಬಗ್ಗೆ ಮಾತಾಡಿದ್ದಾರೆ. ಅಷ್ಟಕ್ಕೂ ಏನಿದು ಅಮಿತ್ ಶಾ ಬಾಯಲ್ಲಿ ಕಾಂತಾರ ಮಾತು..? ಸಿಎಂ ಬೊಮ್ಮಾಯಿಗೆ ಅಮಿತ್ ಶಾ ಆನೆ ಬಲ ತಂದುಕೊಟ್ಟಿದ್ದಾರೆ. ಕರಾವಳಿಯಲ್ಲಿ ಅಬ್ಬರಿಸಿರೋ ಅಮಿತ್ ಶಾ ಬೊಮ್ಮಾಯಿ ಕೈ ಬಲಪಡಿಸಿ ಅಂದಿದ್ದಾರೆ. ಇದ್ರ ಜೊತೆಗೆ ಕಾಂತಾರಾ ಸಿನಿಮಾ ಬಗ್ಗೆ ಮಾತಾಡಿದ್ದಾರೆ ಹೋಮ್ ಮಿನಿಸ್ಟರ್. ಅಷ್ಟಕ್ಕೂ ಏನಿದು ಅಮಿತ್ ಶಾ ಬಾಯಲ್ಲಿ ಕಾಂತಾರ ಮಾತು..? ಬೊಮ್ಮಾಯಿಗೆ ನಾಯಕತ್ವಕ್ಕೆ ಆನೆಬಲ ತಂದುಕೊಟ್ಟ ಅಮಿತ್ ಶಾ, ರಾಜಾಹುಲಿಯನ್ನ ಮರೆಯಲಿಲ್ಲ. ಹಾಗಾದ್ರೆ ಯಡಿಯೂರಪ್ಪನವರ ಬಗ್ಗೆ ಕೇಸರಿ ಚಾಣಕ್ಯ ಹೇಳಿದ್ದೇನು..? ಯಡಿಯೂರಪ್ಪ ಇಲ್ಲದೆ ರಾಜ್ಯದಲ್ಲಿ ಬಿಜೆಪಿಯಿಲ್ಲ. ಬಿಜೆಪಿಯಿಲ್ಲದೆ ಯಡಿಯೂರಪ್ಪ ಇಲ್ಲ. ಸಿಎಂ ಬೊಮ್ಮಾಯಿಗೆ ಆನೆಬಲ ಕೊಟ್ಟ ಅಮಿತ್ ಶಾ, ಕರಾವಳಿ ಸಮಾವೇಶದಲ್ಲಿ ರಾಜಾಹುಲಿ ಬಗ್ಗೆಯೂ ಮಾತಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video