ಬಲವಂತವಾಗಿ ಬೈಬಲ್ ಓದಿಸುತ್ತಿದ್ದೇವೆ ಎಂಬುವುದು ಸುಳ್ಳು: ಕ್ಲಾರೆನ್ಸ್ ಸ್ಕೂಲ್
ಬೈಬಲ್ ಕಲಿಕೆ ಬಗ್ಗೆ ಕ್ಲಾರೆನ್ಸ್ ಸ್ಕೂಲ್ (Clarence School) ವಿತಂಡ ವಾದ ಮಾಡಿದೆ. ಬಲವಂತವಾಗಿ ಬೈಬಲ್ ಓದಿಸುತ್ತಿದ್ದೇವೆ ಎಂಬುದು ಸುಳ್ಳು. ಹಿಂದೂ, ಮುಸ್ಲಿಂ ಮಕ್ಕಳಿಗೆ ಬೈಬಲ್ ಕಲಿಕೆ ಕಡ್ಡಾಯ ಮಾಡಿಲ್ಲ. ಎಲ್ಲಾ ಕ್ರೈಸ್ತ ಶಾಲೆಗಳಿಗೆ ಬೈಬಲ್ ಬಣ್ಣ ಬಳಿಯುವುದು ಸರಿಯಲ್ಲ' ಎಂದು ಆರ್ಚ್ ಬಿಷಪ್ ಪೀಟರ್ ಮಚಾಡೋ ಹೇಳಿಕೆ ನೀಡಿದ್ದಾರೆ.
ಬೆಂಗಳೂರು (ಏ. 28): ಬೈಬಲ್ ಕಲಿಕೆ ಬಗ್ಗೆ ಕ್ಲಾರೆನ್ಸ್ ಸ್ಕೂಲ್ (Clarence School) ವಿತಂಡ ವಾದ ಮಾಡಿದೆ. ಬಲವಂತವಾಗಿ ಬೈಬಲ್ ಓದಿಸುತ್ತಿದ್ದೇವೆ ಎಂಬುದು ಸುಳ್ಳು. ಹಿಂದೂ, ಮುಸ್ಲಿಂ ಮಕ್ಕಳಿಗೆ ಬೈಬಲ್ ಕಲಿಕೆ ಕಡ್ಡಾಯ ಮಾಡಿಲ್ಲ. ಎಲ್ಲಾ ಕ್ರೈಸ್ತ ಶಾಲೆಗಳಿಗೆ ಬೈಬಲ್ ಬಣ್ಣ ಬಳಿಯುವುದು ಸರಿಯಲ್ಲ' ಎಂದು ಆರ್ಚ್ ಬಿಷಪ್ ಪೀಟರ್ ಮಚಾಡೋ ಹೇಳಿಕೆ ನೀಡಿದ್ದಾರೆ.
ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬೈಬಲ್ ಬೋಧನೆ ಕಡ್ಡಾಯಗೊಳಿಸಿರುವ ಆರೋಪದಿಂದ ತೀವ್ರ ವಿವಾದಕ್ಕೀಡಾಗಿರುವ ನಗರದ ಕ್ಲಾರೆನ್ಸ್ ಪ್ರೌಢ ಶಾಲೆಗೆ ಶಿಕ್ಷಣ ಇಲಾಖೆಯು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರಿನ ಕ್ಲಾರೆನ್ಸ್ ಶಾಲೆಯಲ್ಲಿ ಆಡಳಿತ ಮಂಡಳಿಯು ವಿದ್ಯಾರ್ಥಿಗಳಿಗೆ ಬೈಬಲ್ ಬೋಧನೆ ಕಡ್ಡಾಯಗೊಳಿಸಿರುವ ಆರೋಪ ಕೇಳಿಬಂದಿದೆ. ಇದನ್ನು ವಿರೋಧಿಸಿ ಕೆಲ ಪೋಷಕರು ಟ್ವಿಟರ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟಿಸಿದ್ದಾರೆ.