ಮನೆ ಯಜಮಾನಿಗೆ ಗೃಹಲಕ್ಷ್ಮಿ ಅನುಗ್ರಹ: 2000 ರೂಪಾಯಿ ಬೇಕು ಅಂದ್ರೆ ಏನು ಮಾಡಬೇಕು..?

ಮತ್ತೊಂದು ಗ್ಯಾರಂಟಿಗೆ ಫಿಕ್ಸ್ ಆಯ್ತು ಮುಹೂರ್ತ!
ಮನೆ ಯಜಮಾನಿ ಅಕೌಂಟಿಗೆ ಬರಲಿದೆ  2000 ರೂ.!
ಕೊಟ್ಟ ಮಾತು ಪೂರೈಸುತ್ತಿದೆ ಸಿದ್ದರಾಮಯ್ಯ ಸರ್ಕಾರ!

Share this Video
  • FB
  • Linkdin
  • Whatsapp

ಗ್ಯಾರಂಟಿ ಗೃಹಲಕ್ಷ್ಮಿಗೆ (Grilahakshmi) ಕಡೆಗೂ ಫಿಕ್ಸ್ ಮುಹೂರ್ತ ಆಗಿದೆ. ಸಿದ್ದರಾಮಯ್ಯನೋರ ನಾಯಕತ್ವ, ಡಿಕೆ ಶಿವಕುಮಾರ್ ಅವರ ಮುಂದಾಳ್ತನ, ಈ ಎರಡು ಪ್ರಮುಖ ಕಾರಣಗಳಿಂದ, ಕಾಂಗ್ರೆಸ್(Congress) ಪಕ್ಷ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿದಿದೆ. ಆದ್ರೆ, ಈ ಕೈಪಾಳಯದ ಮುಂದೆ, ಅಧಿಕಾರ ಸ್ಥಾಪನೆಗಿಂತಲೂ ದೊಡ್ಡ ಸವಾಲಾಗಿದ್ದು, ಗ್ಯಾರಂಟಿ(guarantee) ಪೂರೈಕೆ. ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಮರುಕ್ಷಣದಿಂದಲೇ ಜನ ಕೇಳಿದ್ದು ಒಂದೇ ಪ್ರಶ್ನೆ ಐದು ಗ್ಯಾರಂಟಿ ಜಾರಿ ಯಾವಾಗ..?. ಇದಕ್ಕೆ ಸಿಎ ಸಿದ್ದರಾಮಯ್ಯ(Siddaramaiah) ಉತ್ತರವನ್ನು ಕೊಡುತ್ತಿದ್ದಾರೆ.ಈಗಾಗಲೇ ಕಾಂಗ್ರೆಸ್ ಕಡೆಯಿಂದ, ಶಕ್ತಿ ಯೋಜನೆ ಜಾರಿಯಾಗಿದೆ. ಅದರ ನಂತರ, ಮನೆಮನೆಗೂ ಉಚಿತ ವಿದ್ಯುತ್ ನೀಡೋ, ಗೃಹಜ್ಯೋತಿ ಯೋಜನೆಗೆ ಅದಾಗಲೇ ಅರ್ಜಿ ಸ್ವೀಕಾರ ಕಾರ್ಯ ನಡೀತಾ ಇದೆ. ಸಚಿವರು ಹೇಳೋ ಪ್ರಕಾರ, ಎಲ್ಲಾ ಅಂದುಕೊಂಡ ಹಾಗೇ ಆದ್ರೆ, ಕೆಲವೇ ದಿನಗಳಲ್ಲಿ ಗೃಹಜ್ಯೋತಿಯ ಫಲಾನುಭವ ಜನರಿಗೆ ದೊರೆಯಲಿದೆ.

ಇದನ್ನೂ ವೀಕ್ಷಿಸಿ: ಕರ್ನಾಟಕದಲ್ಲಿ ಸ್ನೇಹ ಸಾಧಿಸ್ತಾರಾ ಬಿಜೆಪಿ -ಜೆಡಿಎಸ್..?: ದೆಹಲಿಗೆ ಕುಮಾರಸ್ವಾಮಿ ಹೋಗ್ತಿರೋದೇಕೆ..?

Related Video