ವಾಣಿಜ್ಯನಗರಿಯಲ್ಲಿ ಕ್ರಿಕೆಟ್‌ ಪ್ರೇಮಿಗಳ ಸಂಭ್ರಮ: ಮುಂಬೈ ಬೀದಿಗಳಲ್ಲಿ ಅಭಿಮಾನಿಗಳ ಹರ್ಷೋದ್ಘಾರ

ಮುಂಬೈನಲ್ಲಿ ಕ್ರಿಕೆಟ್‌ ಪ್ರೇಮಿಗಳು ಟೀಮ್‌ ಇಂಡಿಯಾ ಆಟಗಾರರು ಬರುತ್ತಿದ್ದಂತೆ ಸಂಭ್ರಮಿಸಿದ್ದು, ಬೀದಿ ಬೀದಿಗಳಲ್ಲಿ ಹರ್ಷೋದ್ಘಾರವನ್ನು ವ್ಯಕ್ತಪಡಿಸಿದ್ದಾರೆ. 

Share this Video
  • FB
  • Linkdin
  • Whatsapp

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ (Team India) ನಿನ್ನೆ ಮುಂಜಾನೆ 6 ಗಂಟೆಗೆ ನವದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ರಾಷ್ಟ್ರರಾಜಧಾನಿಯಲ್ಲಿ ವಿಶ್ವ ಚಾಂಪಿಯನ್ನರಿಗೆ (World Cup) ಭರ್ಜರಿ ಸ್ವಾಗತ ಸಿಕ್ಕಿದೆ. ಇನ್ನು ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ತವರಿಗೆ ಬಂದಿಳಿಯುತ್ತಿದ್ದಂತೆಯೇ ಇಡೀ ಭಾರತ ತಂಡಕ್ಕೆ ನವದೆಹಲಿಯ ಏರ್‌ಪೋರ್ಟ್ ಆವರಣದಲ್ಲಿಯೇ ಭವ್ಯ ಸ್ವಾಗತ ನೀಡಲಾಯಿತು. ಇನ್ನು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಕೆಲವು ಕ್ರಿಕೆಟಿಗರು ಬಿಂದಾಸ್ ಸ್ಟೆಪ್‌ ಹಾಕಿ ಗಮನ ಸೆಳೆದರು. ಸಂಜೆ 5 ಗಂಟೆಯಿಂದ ನಾರಿಮನ್ ಪಾಯಿಂಟ್‌ನಿಂದ ಸುಮಾರು 2 ಕಿ. ಮೀ. ದೂರ ಇರುವ ವಾಂಖೇಡೆ ಕ್ರೀಡಾಂಗಣದವರೆಗೆ ಆಟಗಾರರು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು. 

ಇದನ್ನೂ ವೀಕ್ಷಿಸಿ:  ಮುಂಬೈನಲ್ಲಿ 'ವಿಶ್ವ' ವಿಜೇತರಿಗೆ ಅದ್ಧೂರಿ ಸನ್ಮಾನ: ವಿಶ್ವಕಪ್‌ ವೀರರ 2.8 ಕಿ.ಮೀ ರೋಡ್‌ ಶೋ

Related Video