Asianet Suvarna News Asianet Suvarna News

ಮುಂಬೈನಲ್ಲಿ 'ವಿಶ್ವ' ವಿಜೇತರಿಗೆ ಅದ್ಧೂರಿ ಸನ್ಮಾನ: ವಿಶ್ವಕಪ್‌ ವೀರರ 2.8 ಕಿ.ಮೀ ರೋಡ್‌ ಶೋ

ಮುಂಬೈನಲ್ಲಿ ವಿಶ್ವಕಪ್‌ ವಿಜೇತ ಭಾರತ ತಂಡದ ಆಟಗಾರರಿಗೆ ಅದ್ಧೂರಿಯಾಗಿ ಸ್ವಾಗತ ಮಾಡಲಾಯಿತು.
 

ಭಾರತಕ್ಕೆ ಟಿ20 ವಿಶ್ವಕಪ್ (World Cup) ಚಾಂಪಿಯನ್ನರ ಆಗಮನವಾಗಿದೆ. 3 ದಿನ ತಡವಾಗಿ ಬಂದ ರೋಹಿತ್ ಪಡೆಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಬಾರ್ಬಡೋಸ್‌ನಂತೆ ಭಾರತದಲ್ಲಿಯೂ (India) ಸಂಭ್ರಮ ಮನೆ ಮಾಡಿತ್ತು. ವಿಶ್ವ ವಿಜೇತರರಿಗೆ ಸನ್ಮಾನ ಮಾಡಿದ ಪ್ರಧಾನಿ ಮೋದಿ(Narendra modi) ಉಪಹಾರ ಕೂಟ ಆಯೋಜಿಸಿದ್ರು. 17 ವರ್ಷಗಳ ಬಳಿಕ ಟೀಮ್ ಇಂಡಿಯಾ (Team India) ವಿಶ್ವಕಪ್ ಕಾಳಗದ ಅಗ್ನಿ ಪರೀಕ್ಷೆ ಗೆದ್ದಾಗಿದೆ. ಮಹಾ ಕದನದಲ್ಲಿ ಆಟಗಾರರು ನೀಡಿದ ಪ್ರದರ್ಶನದಿಂದಾಗಿ ವಿಶ್ವದೆದುರು  ಹೀರೋಗಳಾಗಿದ್ದಾರೆ. ಟಿ20 ವಿಶ್ವಕಪ್ ಗೆದ್ದು ಚರಿತ್ರೆ ಸೃಷ್ಟಿಸಿದ ಟೀಮ್ ಇಂಡಿಯಾ ಆಟಗಾರರು ಸ್ವದೇಶಕ್ಕೆ ಮರಳಿದ್ದಾರೆ. ಬೆಳಗ್ಗೆ ವಿಶೇಷ ವಿಮಾನದಲ್ಲಿ ದೆಹಲಿಗೆ ಬಂದಿಳಿದ ರೋಹಿತ್ ಬಳಗವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯ್ತು.

ಇದನ್ನೂ ವೀಕ್ಷಿಸಿ:  Today Horoscope: ಇಂದು ಮಣ್ಣೆತ್ತಿನ ಅಮಾವಾಸ್ಯೆ ಇದ್ದು, ಇದರ ಆಚರಣೆ ಏಕೆ ಮಾಡಬೇಕು ?

Video Top Stories