2023ರ ಚೆಸ್ ವಿಶ್ವಕಪ್‌ಗೆ ಭಾರತೀಯ ಪ್ರಜ್ಞಾನಂದ ಎಂಟ್ರಿ: ಹಿಸ್ಟರಿ ಬ್ರೇಕ್ ಮಾಡಿದ 18ರ ಪ್ರಜ್ಞಾನಂದ !
2023 ಚೆಸ್ ವಿಶ್ವಕಪ್ ಫೈನಲ್‌ಗೆ ಭಾರತೀಯ ಎಂಟ್ರಿ
ವಿಶ್ವಕಪ್ ಫೈನಲ್ಗೆ 18ರ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ
ಸೆಮಿಫೈನಲ್ನಲ್ಲಿ ಅಮೆರಿಕಾದ ಕರುವಾನಾ ವಿರುದ್ಧ ಗೆಲುವು
2 ದಶಕಗಳ ಬಳಿಕ ಚೆಸ್ ವಿಶ್ವಕಪ್‌ನ ಫೈನಲ್ ಪ್ರವೇಶಿಸಿದ ಭಾರತೀಯ ಎನ್ನುವ ದಾಖಲೆಯನ್ನು ಆರ್.ಪ್ರಜ್ಞಾನಂದ(R Praggnanandhaa) ಬರೆದಿದ್ದಾರೆ. ಇವರು ಸೆಮಿಫೈನಲ್‌ನಲ್ಲಿ ಅಮೆರಿಕಾದ ಕರುವಾನಾ ವಿರುದ್ಧ ಆಡಿದ್ದು, ಅವರನ್ನು ಸೋಲಿಸಿದ್ದಾರೆ. ಟೈಬ್ರೇಕರ್ನಲ್ಲಿ 3.5-2.5ರಿಂದ ಕರುವಾನಾ ವಿರುದ್ಧ ಜಯ ಸಾಧಿಸಿದ್ದಾರೆ. ವಿಶ್ವದ ನಂ.1 ಚೆಸ್ ಆಟಗಾರ ಕಾರ್ಲ್ಸನ್(Carlson) ವಿರುದ್ಧ ಫೈನಲ್ ಮ್ಯಾಚ್ ಆಡಲಿದ್ದಾರೆ. ಫೈನಲ್ ಗೆಲ್ಲುವ ಮೂಲಕ ಪ್ರಜ್ಞಾನಂದ ಇತಿಹಾಸ ನಿರ್ಮಿಸಲಿದ್ದಾರೆ. ಚೆಸ್(Chess) ವಿಶ್ವಕಪ್ ಪಟ್ಟ ಮುಡಿಗೇರಿಸಿಕೊಳ್ಳಲು ಇನ್ನೊಂದೆ ಹೆಜ್ಜೆ ಮಾತ್ರ ಬಾಕಿ ಇದ್ದು, ಚಾಂಪಿಯನ್ ವಿಶ್ವನಾಥನ್ ಆನಂದ ಬಳಿಕ ಪ್ರಜ್ಞಾನಂದ ಸಾಧನೆ ಮಾಡಲಿದ್ದಾರೆ. 2002ರಲ್ಲಿ ಚೆಸ್ ವಿಶ್ವಕಪ್‌ನನ್ನು ವಿಶ್ವನಾಥನ್ ಆನಂದ್(Viswanathan Anand) ಗೆದ್ದಿದ್ದರು. ನಾರ್ವೆ ಚೆಸ್ ಪಟು ಕಾರ್ಲ್ಸನ್ ವಿರುದ್ಧ ಪ್ರಜ್ಞಾನಂದ ಸೆಣಸಾಟ ನಡೆಸಲಿದ್ದು, 2 ದಶಕಗಳಲ್ಲೇ ಚೆಸ್ ವಿಶ್ವಕಪ್ ಫೈನಲ್ಗೇರಿದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದನ್ನೂ ವೀಕ್ಷಿಸಿ: ಒಂದು ಕುರ್ಚಿ.. ಇಬ್ಬರು ಅಧಿಕಾರಿಗಳ ಫೈಟ್: ಸರ್ಕಾರದ ಆದೇಶ..ಇಬ್ಬರ ನಡುವೆ ಕಿತ್ತಾಟ