ಒಂದು ಕುರ್ಚಿ.. ಇಬ್ಬರು ಅಧಿಕಾರಿಗಳ ಫೈಟ್: ಸರ್ಕಾರದ ಆದೇಶ..ಇಬ್ಬರ ನಡುವೆ ಕಿತ್ತಾಟ

ಜನರು ಕಿತ್ತಾಟ ನಡೆಸೋದು ಕಾಮನ್..ಆದ್ರೆ ಇಲ್ಲಿ ಡಾಕ್ಟರ್‌ಗಳೇ ದೊಡ್ಡ ಜಗಳ ಆಡಿದ್ದಾರೆ. ಬಾಗಲಕೋಟೆ ಜಿಲ್ಲಾಸ್ಪತ್ರೆಯಲ್ಲಿ ಇಬ್ಬರು DHOಗಳು ಕುರ್ಚಿಗಾಗಿ ಕಿತ್ತಾಟ ನಡೆಸುತ್ತಿದ್ದಾರೆ. 
 

Share this Video
  • FB
  • Linkdin
  • Whatsapp

ಇಬ್ಬರು ಅಧಿಕಾರಿಗಳ ಮಧ್ಯೆ ಮಾತಿನ ಚಕಮಕಿ.. ಕಣ್ಣೀರು ಹಾಕ್ತಿರೋ ಮಹಿಳಾ ಅಧಿಕಾರಿ.. ಈ ದೃಶ್ಯ ಕಂಡು ಬಂದಿದ್ದು ಬಾಗಲಕೋಟೆ ಜಿಲ್ಲಾ ಆರೋಗ್ಯ ಕೇಂದ್ರದಲ್ಲಿ. ಸರ್ಕಾರದ ವರ್ಗಾವಣೆ (Transfer)ಆದೇಶದಿಂದ ಈಗ ಒಂದೇ ಕುರ್ಚಿಗೆ ಇಬ್ಬರ ನಡುವೆ ಕಿತ್ತಾಟ ಶುರುವಾಗಿದೆ. ಬಾಗಲಕೋಟೆ(Bagalkot) ಜಿಲ್ಲಾಸ್ಪತ್ರೆಯಲ್ಲಿ DHO ಆಗಿ ಡಾ.ಜಯಶ್ರೀ ಎಮ್ಮಿ ಕಾರ್ಯನಿರ್ವಹಿಸುತ್ತಿದ್ರು. ಆದ್ರೆ ಕೆಲ ದಿನ ರಜೆ ಮೇಲೆ ಹೋಗಿ ವಾಪಸ್ ಆಗುವಷ್ಟರಲ್ಲಿ, ಇದೇ ಹುದ್ದೆಗೆ ಸರ್ಕಾರ ವಿಜಯಪುರದ DHO ಆಗಿದ್ದ ವಿಜಯಕುಮಾರ್ ಯರಗಲ್‌ರನ್ನು ನೇಮಿಸಿದೆ. ಜಯಶ್ರೀಗೆ ಯಾವುದೇ ಜಾಗ ತೊರಿಸದೇ ವರ್ಗಾವಣೆ ಮಾಡಿದೆ. ಸರ್ಕಾರದ ಈ ಆದೇಶದ ವಿರುದ್ಧ ಸಿಟ್ಟುಗೆದ್ದ ಡಾಕ್ಟರ್ ಜಯಶ್ರೀ ಕೆಎಟಿ ಮೋರೆ ಹೋಗಿ ಸ್ಟೇ ತಂದಿದ್ದಾರೆ. ಇನ್ನು ನೀವು ನಿಮ್ಮ ಕೆಲಸ ಮುಂದುವರೆಸಿ ಎಂದು ಸಿಇಒ ಹೇಳಿದ್ದಾರೆ. ಅದ್ರಂತೆ ಕಚೇರಿಗೆ ಬಂದಿದ್ದೇನೆ ಎಂದು ಡಾ.ಜಯಶ್ರೀ ಎಮ್ಮಿ ಹೇಳ್ತಿದ್ದಾರೆ. ಕೆಎಟಿಯಿಂದ (KAT) ಸ್ಟೇ ತಂದ ಡಾಕ್ಟರ್ ಜಯಶ್ರೀ ಡಿಎಚ್ಒ ಕುರ್ಚಿ ತನಗೇ ಬಿಟ್ಟು ಕೊಡುವಂತೆ ಪಟ್ಟು ಹಿಡಿದಿದ್ದಾರೆ. ಆದ್ರೆ, ಇತ್ತ ಡಾಕ್ಟರ್ ವಿಜಯಕುಮಾರ್ ತಾನು ಸರ್ಕಾರದ ಆದೇಶದ ಪ್ರಕಾರವೇ ಬಂದಿದ್ದೇನೆ. ಆದೇಶ ಪ್ರತಿಯೂ ನನ್ನ ಬಳಿ ಇದೆ. ಇಲ್ಲಿ ತಾನು ಒಬ್ಬನೇ ಡಿಹೆಚ್‌ಒ ಎನ್ನುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಹಳ್ಳ ಹಿಡಿದ ಬಿಜೆಪಿ ಸರ್ಕಾರದ ಯೋಜನೆ: ತುಕ್ಕು ಹಿಡಿದ ‘ಪಶು ಸಂಜೀವಿನಿ’ ಆ್ಯಂಬುಲೆನ್ಸ್ !

Related Video