ಇವರು ಪ್ರತಿಭಟಿಸುವ ರೈತರಲ್ಲ! ಕೊರೆಯುವ ಚಳಿಯಲ್ಲೂ ರಸ್ತೆಯಲ್ಲೇ ಮಲಗಿದ ಕುಸ್ತಿಪಟುಗಳು!
ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳಿದ್ದ ರಾಜ್ಯದ ಕುಸ್ತಿಪಟುಗಳಿಗೆ ರಾಜ್ಯ ಕುಸ್ತಿ ಸಂಘದಿಂದ ನಿರ್ಲಕ್ಷ್ಯ, ದೌರ್ಜನ್ಯ ಆರೋಪ ಕೇಳಿ ಬಂದಿದೆ.
ಬೆಳಗಾವಿ (ಜ. 29): ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳಿದ್ದ ರಾಜ್ಯದ ಕುಸ್ತಿಪಟುಗಳಿಗೆ ರಾಜ್ಯ ಕುಸ್ತಿ ಸಂಘದಿಂದ ನಿರ್ಲಕ್ಷ್ಯ, ದೌರ್ಜನ್ಯ ಆರೋಪ ಕೇಳಿ ಬಂದಿದೆ.
ಜನವರಿ 21 ಹಾಗೂ 22ರಂದು ನೋಯ್ಡಾದಲ್ಲಿ ರಾಷ್ಟ್ರಮಟ್ಟದ ಹಿರಿಯರ ಕುಸ್ತಿ ಪಂದ್ಯಾವಳಿ ಆಯೀಜಿಸಲಾಗಿತ್ತು. ಪಂದ್ಯಾವಳಿಯಲ್ಲಿ ಭಾಗಿಯಾಗಲು ರಾಜ್ಯದಿಂದ ಐವರು ಕುಸ್ತಿಪಟುಗಳು ತೆರಳಿದ್ದರು. ಆದರೆ ಕುಸ್ತಿಪಟುಗಳ ಜೊತೆ ಯಾವುದೇ ತರಬೇತುದಾರ, ಸಿಬ್ಬಂದಿ ತೆರಳಿಲ್ಲ. ಯಾವುದೇ ರೀತಿಯ ಸ್ಪೋರ್ಟ್ಸ್ ಕಿಟ್ ಅಥವಾ ಸೌಲಭ್ಯ ನೀಡಿಲ್ಲ. ಪಂದ್ಯಾವಳಿ ಮುಗಿಸಿ ವಾಪಸ್ ಬರಬೇಕೆಂದರೂ ರೈಲ್ವೇ ಟಿಕೆಟ್ ರದ್ದಾಗಿತ್ತು. ಕುಸ್ತಿಪಟುಗಳು ಕರೆ ಮಾಡಿದ್ರೆ ರಾಜ್ಯ ಕುಸ್ತಿ ಸಂಘದ ಕಾರ್ಯದರ್ಶಿ ನರಸಿಂಹಮೂರ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಬೆಳಗೆದ್ದು ಯಾವ ಬೈಕ್‌ನಲ್ಲಿ ನಾ ಹೊರಡಲಿ, ಜಾವಾನೋ, ಲ್ಯಾಂಬ್ರಟ್ಟಾನೋ ಬೈಕ್ ಮೂವತ್ತಿದೆ!
ಮರಳಿ ವಾಪಸ್ ಬರಲಾಗದೇ ಎರಡು ದಿನ ರೈಲ್ವೇ ನಿಲ್ದಾಣದ ಹೊರಗೆ ಕಳೆದು, ಕೊನೆಗೆ ಕರ್ನಾಟಕ ರಾಜ್ಯ ಭಾರತೀಯ ಶೈಲಿ ಕುಸ್ತಿ ಸಂಘದ ಅಧ್ಯಕ್ಷ ರತನ್ ಮಠಪತಿಗೆ ಕರೆ ಮಾಡಿ, ಅವರ ನೆರವಿನಿಂದ ವಾಪಸ್ಸಾಗಿದ್ದಾರೆ. ರಾಜ್ಯ ಕುಸ್ತಿ ಸಂಘದ ಕಾರ್ಯದರ್ಶಿ ನರಸಿಂಹಮೂರ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕುಸ್ತಿಪಟುಗಳು ಡಿಸಿ ಮನವಿ ಸಲ್ಲಿಸಿದ್ದಾರೆ.