Asianet Suvarna News Asianet Suvarna News

ಚಂದ್ರಯಾನ 3 ಸಕ್ಸಸ್‌: ಇಸ್ರೋದ ಮುಂದಿನ ಪ್ಲ್ಯಾನ್‌ ಏನು ?

ಚಂದ್ರಯಾನದ ಬಳಿಕ ಇದೀಗ ಇಸ್ರೋ ಸೂರ್ಯಯಾನ ನಡೆಸಲು ಮುಂದಾಗಿದೆ. ‘ಆದಿತ್ಯ’ ಎಂಬ ನೌಕೆಯನ್ನು ಉಡಾವಣೆ ಮಾಡಲಿದೆ.
 

ಚಂದ್ರಯಾನ 3 ಯಶಸ್ವಿಯಾದ ಬೆನ್ನಲ್ಲೇ ಸಾಲು ಸಾಲು ಯೋಜನೆಗಳನ್ನು ಇಸ್ರೋ(ISRO) ಹಾಕಿಕೊಂಡಿದೆ. ಚಂದ್ರಯಾನ ಯಶಸ್ಸಿನ ಹುಮ್ಮಸ್ಸಿನಲ್ಲಿರುವ ಇಸ್ರೋ, ಮುಂದಿನ ತಿಂಗಳು ಸೂರ್ಯ ಶಿಕಾರಿಗೆ ಹೊರಡಲಿದ್ದು, ‘ಆದಿತ್ಯ ಎಲ್‌-1’( Aditya L-1) ಎಂಬ ನೌಕೆಯನ್ನು ಉಡಾವಣೆ ಮಾಡಲಿದೆ. ಇದೇ ಮೊದಲ ಬಾರಿಗೆ ಚಂದ್ರನ(Moon) ಬಳಿಕ ಸೂರ್ಯನ(Sun) ಅಧ್ಯಯನ ಮಾಡಲು ಇಸ್ರೋ ಮುಂದಾಗಿದೆ. ಇಸ್ರೋದ ಮುಂದಿನ ಗುರಿ ಮತ್ತಷ್ಟು ಕುತೂಹಲವನ್ನು ಹುಟ್ಟು ಹಾಕಿದೆ. ಅಲ್ಲದೇ ಮಾನವ ಸಹಿತ ಗಗನಯಾನಕ್ಕೂ ಇಸ್ರೋ ಮುಂದಾಗಿದೆ. ಜಪಾನ್‌ ಜೊತೆ ಗೂಡಿ ಚಂದ್ರಯಾನ 4 ನಡೆಸಲು ಚಿಂತನೆ ನಡೆಸಿದೆ. 2025ಕ್ಕೆ ಮತ್ತೊಂದು ಚಂದ್ರಯಾನಕ್ಕೆ ನಡೆಸಲು ಇಸ್ರೋ ಯೋಜನೆ ರೂಪಿಸಿದೆ.

ಇದನ್ನೂ ವೀಕ್ಷಿಸಿ:  ಇಸ್ರೋ ವಿಜ್ಞಾನಿಗಳ ಕನಸಿಗೆ ಅಮೇಶ್‌ ಕಂಪನಿ ಸಾಥ್‌: ತ್ರಿಡಿ ಪ್ರಿಟಿಂಗ್‌ ಬಗ್ಗೆ ಡಾ. ವಿಶ್ವಾಸ್‌ ಹೇಳಿದ್ದೇನು ?