Asianet Suvarna News Asianet Suvarna News

ಇಸ್ರೋ ವಿಜ್ಞಾನಿಗಳ ಕನಸಿಗೆ ಅಮೇಶ್‌ ಕಂಪನಿ ಸಾಥ್‌: ತ್ರಿಡಿ ಪ್ರಿಟಿಂಗ್‌ ಬಗ್ಗೆ ಡಾ. ವಿಶ್ವಾಸ್‌ ಹೇಳಿದ್ದೇನು ?

ಚಂದ್ರನ ಮೇಲೆ ನಮ್ಮ ಲ್ಯಾಂಡರ್‌ ಯಶಸ್ವಿಯಾಗಿ ಇಳಿದಿದೆ. ಇಲ್ಲಿ ಮೂಡಲಾದ ಭಾರತದ ಅಚ್ಚು ಯಾವಾಗಲೂ ಇರಲಿದೆ ಎಂದು ಡಾ. ವಿಶ್ವಾಸ್‌ ಹೇಳಿದರು.
 

ಚಂದ್ರನ ಅಂಗಳದಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ನಮ್ಮ ಇಂಡಿಯಾದ ಅಚ್ಚು ಚಂದ್ರನ ಮೇಲೆ ಮೂಡಬೇಕು ಎಂಬುದು ಇಸ್ರೋ ವಿಜ್ಞಾನಿಗಳ ಕನಸಾಗಿತ್ತು. ರೋವರ್‌ ಲ್ಯಾಂಡ್‌ ಮಾಡಿದ ಬಳಿಕ ಅಶೋಕ ಚಕ್ರದ ಮುದ್ರೆಯನ್ನು ಅಲ್ಲಿ ಒತ್ತಲಾಗಿದೆ. ಈ ರೋವರ್‌ನಲ್ಲಿರುವ ಅಶೋಕ ಸ್ತಂಭದ ತ್ರಿಡಿ ಅಚ್ಚನ್ನು ಅಮೇಸ್‌ ಕಂಪನಿ(Amesh company) ರೆಡಿ ಮಾಡಿದೆ. ಈ ಕಂಪನಿಯ ಬ್ಯುಸಿನೆಸ್ ಹೆಡ್‌ ಡಾ. ವಿಶ್ವಾಸ್‌ ಈ ಬಗ್ಗೆ ಮಾತನಾಡಿದ್ದಾರೆ. ಇದು ಸಂಪೂರ್ಣ ಇಸ್ರೋದ ಐಡಿಯಾ ಆಗಿದೆ. ನಾವು ಕೇವಲ ಶೇಪ್‌ನನ್ನು ಮಾತ್ರ ನೀಡಿದ್ದೇವೆ. ಇದನ್ನು ನಾವು ಒಂದೂವರೆ ವರ್ಷದ ಹಿಂದೆ ಮಾಡಿದ್ದೇವೆ. ತ್ರಿಡಿ ಪ್ರಿಟಿಂಗ್‌ ಮೂಲಕ ಈಗಾಗಲೇ ನಾವು ಹಲವಾರು ಬಾರಿ ಈ ರೀತಿ ಕೆಲಸವನ್ನು ಮಾಡಿಕೊಟ್ಟಿದ್ದೇವೆ. ಚಂದ್ರನ ಮೇಲೆ ಚಕ್ರ ತಿರುಗಿದಾಗ, ಒಂದು ಅಚ್ಚು ಮೂಡಲಿದೆ. ಇದರಲ್ಲಿ ಒಂದರಲ್ಲಿ ಇಸ್ರೋ ಲೋಗೋ ಮತ್ತೊಂದರಲ್ಲಿ ಭಾರತದ ಅಶೋಕ ಸ್ತಂಭ ಇದೆ ಎಂದು ಡಾ. ವಿಶ್ವಾಸ್‌ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ನಮ್ಮ ರಾಕೆಟ್‌ಗಳ ಸಾಮರ್ಥ್ಯ ಅರಿತ ಇತರ ರಾಷ್ಟ್ರಗಳು ನಮ್ಮ ಬಳಿ ಬರುತ್ತಿವೆ: ವಿಜ್ಞಾನಿ ಗುರು ಪ್ರಸಾದ್‌

Video Top Stories