ಚಂದ್ರನ ಗೆದ್ದ ಭಾರತ ಸಾಧಿಸಿದ್ದೇನು..? ಚಂದ್ರಯಾನ-3ಕ್ಕೆ ಚಂದ್ರಯಾನ-2ರ ಕೊಡುಗೆ ಏನು..?
ಆ ಸೋಲಿನ ಬಳಿಕ ಭಾರತ ಕಲಿತಿದ್ದೇನೇನು..?
ಸಕ್ಸಸ್ ಸ್ಟೋರಿಯ ಹಿಂದೆ ರಣರೋಚಕ ಪರಿಶ್ರಮ!
ಜಗತ್ತನ್ನೇ ನಿಬ್ಬೆರಗಾಗಿಸಿದ್ದು ಹೇಗೆ ನಮ್ಮ ಇಸ್ರೋ.?
ಒಂದು ಸೋಲು, ಅದು ಹತಾಶೆಗೆ ಕಾರಣವಾಗ್ಬಾರ್ದು.. ಮುಂದಿನ ದೊಡ್ಡ ಗೆಲುವಿಗೆ ಸ್ಪೂರ್ತಿಯಾಗ್ಬೇಕು. ಸೋಲಿನಿಂದ ಕುಗ್ಗೋದರ ಬದಲು, ಅದರಿಂದ ಕಲಿತು ಮುನ್ನುಗ್ಬೇಕು.. ಇಂಥದ್ದೊಂದು ಪಾಠವನ್ನ ನಾವು ನಮ್ಮ ಇಸ್ರೋದ ಸಾಧನೆ ನೋಡಿ ಕಲಿಬೇಕು. ಕಳೆದ ಸಲ ಚಂದ್ರಯಾನ-2ರಲ್ಲಿ(Chandrayaan-2) ನಾವು ಯಶಸ್ಸು ಸಾಧಿಸೋ ಹಂತದಲ್ಲಿ ಸೋತಿದ್ವಿ.. ಆದ್ರೆ ಆ ಸೋಲಿನಿಂದ ಪಾಠ ಕಲಿತು, ಸಾಧನೆಯ ಉತ್ತುಂಗದಲ್ಲಿದ್ದೀವಿ. ನಮ್ಮ ಭಾರತ ಆಂತರಿಕ್ಷದಲ್ಲಿ ತ್ರಿವಿಕ್ರಮ ಸಾಧನೆ ಮಾಡಿದೆ. ಕಳೆದ ಜುಲೈ 14ರಂದು ಶ್ರೀಹರಿಕೋಟಾದಿಂದ ಉಡಾವಣೆಗೊಂಡಿದ್ದ ಇಸ್ರೋದ ಚಂದ್ರಯಾನ-3 ನೌಕೆಯ ಭಾಗವಾದ ವಿಕ್ರಂ ಲ್ಯಾಂಡರ್(Vikram lander) ಆಗಸ್ಟ್ 23, ಬುಧವಾರ ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರನ ಮೇಲೆ ಲ್ಯಾಂಡ್ ಆಗಿದೆ.. ಇಡೀ ಭಾರತವೇ ಸಂಭ್ರಮಿಸಿದೆ.. ಇಡೀ ಜಗತ್ತೇ ಭಾರತಕ್ಕೆ ಜೈಹೋ ಅಂತಿದೆ. ಇವತ್ತು ಚಂದ್ರನ ಮೇಲೆ ನಡೆದಿದ್ದು, ಹೆಸರಿಗಷ್ಟೇ ಸಾಫ್ಟ್ ಲ್ಯಾಂಡಿಂಗ್. ಅದರ ಅಸಲಿ ವೇಗದ ಕಲ್ಪನೆ ಕೂಡ ಸಾಮಾನ್ಯರಿಗೆ ಮಾಡಿಕೊಳ್ಳೋದು ಕಷ್ಟವಾಗುತ್ತೆ. ಯಾಕಂದ್ರೆ, ಈ ಲ್ಯಾಂಡರ್ ಚಂದ್ರನ(Moon) ಮೇಲೆ ಇಳಿಬೇಕಾದ್ರೆ, ಸೆಕೆಂಡ್‌ಗೆ ಕನಿಷ್ಠ 2 ಮೀ ನಿಂದ, ಗರಿಷ್ಠ 3 ಮೀ ವೇಗದಲ್ಲಿರುತ್ತದೆ. ಅಂದರೆ, ಗಂಟೆಗೆ 7ವರೆಯಿಂದ ಹತ್ತಿರತ್ತಿರ 11 ಕಿ.ಮೀ ಸ್ಪೀಡ್‌ನಲ್ಲಿ ಲ್ಯಾಂಡ್ ಆಗಿತ್ತು. ಈ ಬಾರಿ ಭಾರತ ಈ ಸಾಧನೆಯ ಬಗ್ಗೆ ಅದೆಷ್ಟು ಕಾನ್ಫಿಡೆಂಟ್ ಆಗಿತ್ತು ಅಂದ್ರೆ, ತನ್ನ ಬಳಿ ಚಂದ್ರಯಾನ-3ರ ಮುಂದಿನ ನಡೆಯ ಬಗ್ಗೆ ಯಾವುದೇ ಪ್ಲಾನ್ ಬಿ ಇಲ್ಲ ಅಂತ ಎದೆಯುಬ್ಬಿಸಿಕೊಂಡು ಹೇಳಿದ್ರು ವಿಜ್ಞಾನಿಗಳು.. ಅದರರ್ಥ, ಭಾರತ ವಿಕ್ರಮ ಸಾಧನೆ ಮಾಡೋದ್ರಲ್ಲಿ ಅನುಮಾನವೇ ಇಲ್ಲ ಅಂತ.. ಈ ಆ ಆತ್ಮವಿಶ್ವಾಸದ ಮಟ್ಟ ಏನು ಅನ್ನೋದು ವಿಶ್ವಕ್ಕೇ ಸಾಬೀತಾಗಿದೆ..
ಇದನ್ನೂ ವೀಕ್ಷಿಸಿ: ಚಂದ್ರಯಾನ 3 ಸಕ್ಸಸ್: ಇಸ್ರೋದ ಮುಂದಿನ ಪ್ಲ್ಯಾನ್ ಏನು ?