Asianet Suvarna News Asianet Suvarna News

ಚಂದ್ರಲೋಕದಲ್ಲಿ ಭಾರತದ ಐತಿಹಾಸಿಕ ಸಾಧನೆ: ಚಂದ್ರನ ದಕ್ಷಿಣ ಧ್ರುವದಲ್ಲಿ ಹೇಗಿತ್ತು ವಿಕ್ರಮನ ಪರಾಕ್ರಮ..?

ಚರಿತ್ರೆ  ಮರೆಯದ ಚಾತುರ್ಯಕ್ಕೆ ಸಾಕ್ಷಿಯಾಯ್ತು ಭಾರತ..!
ದಶಕದ ಶ್ರಮ..ಕೋಟಿ ಕನಸು.. ಈಡೇರಿದ್ದು ಹೇಗೆ..?
'ವಿಕ್ರಮ ವಿಜಯ'ಚಂದ್ರ ಚುಂಬನದ ನಂತರ ಮುಂದೇನು..?

ಕೋಟ್ಯಂತರ ಭಾರತೀಯರ ಎದೆಯಲ್ಲಿ ಶುರುವಾಗಿದ್ದ ಢವ ಡವ 4 ವರ್ಷಗಳ ಹಿಂದಿನ ಆಘಾತ, ನೋವು, ಹತಾಶೆಯ ನೆನಪು. ಆ ಕ್ಷಣ ಎದುರಾಗದಿರಲಿ ಅಂತ ದೇವರಿಗೆ ಮೊರ ಇಟ್ಟವರು ಕೋಟಿ ಕೋಟಿ ಮಂದಿ. ಕೊನೆಗೂ ಆ ಕೋಟಿ ಹಾರೈಕೆ ಫಲ ಕೊಟ್ಟಿದೆ. ಚಂದ್ರಲೋಕದಲ್ಲಿ ಭಾರತದ ಹೆಮ್ಮೆಯ ಪ್ರತೀಕ ವಿಕ್ರಮ ಲ್ಯಾಂಡರ್(Vikrama Lander), ಸೇಫ್ ಆಗಿ ಲ್ಯಾಂಡ್ ಆಗಿದೆ. ಇದು ಇಡೀ ದೇಶವೇ ಸಂಭ್ರಮಿಸುವಂತೆ ಮಾಡಿದ ಐತಿಹಾಸಿಕ ಕ್ಷಣ. ಭಾರತದ ಶಕ್ತಿ-ಸಾಮರ್ಥ್ಯ, ನಮ್ಮ ಇಸ್ರೋ( ISRO) ವಿಜ್ಞಾನಿಗಳ ಚರಿತ್ರೆ ಮರೆಯದ ಚಾತುರ್ಯವನ್ನು ಇಡೀ ಜಗತ್ತಿನ ಮುಂದೆ ಅನಾವರಣ ಮಾಡಿ ಚಾರಿತ್ರಿಕ ಕ್ಷಣ. ಕಳೆದ ಜುಲೈ 14ರಂದು ಭೂಮಂಡಲದಿಂದ ಚಂದ್ರಲೋಕದತ್ತ ಹೊರಟಿದ್ದ ವಿಕ್ರಮ ಲ್ಯಾಂಡರ್, ಕೊನೆಗೂ ತಮ್ಮ ಗುರಿ ತಲುಪಿ ಬಿಟ್ಟಿದೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ ನೌಕೆಯ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿದಿದೆ. ದೇಶದ ಘನತೆಯನ್ನು, ಕೀರ್ತಿಯನ್ನು ಬಾನೆತ್ತರದಲ್ಲಿ ಮೆರೆಸಿದ ಇಸ್ರೋ ವಿಜ್ಞಾನಿಗಳ ಶ್ರಮಕ್ಕೆ ಸಿಕ್ಕ ಪ್ರತಿಫಲ. ಚಂದ್ರಯಾನ-3 (Chandrayaan-3) ಯಶಸ್ಸಾಗಿರೋದು ಭಾರತದ ಸಾಟಿಯಿಲ್ಲದ ಸಾಹಸಕ್ಕೆ ಮತ್ತೊಂದು ನಿದರ್ಶನ. ಚಂದ್ರನ ದಕ್ಷಿಣ ಧ್ರುವದಲ್ಲಿ ಉಪಗ್ರಹವನ್ನು ಇಳಿಸಿದ ಮೊದಲ ರಾಷ್ಟ್ರ ಎಂಬ ಹಿರಿಮೆಗೆ ಭಾರತ ಪಾತ್ರವಾಗಿದೆ.

ಇದನ್ನೂ ವೀಕ್ಷಿಸಿ:  ಚಂದ್ರನ ಗೆದ್ದ ಭಾರತ ಸಾಧಿಸಿದ್ದೇನು..? ಚಂದ್ರಯಾನ-3ಕ್ಕೆ ಚಂದ್ರಯಾನ-2ರ ಕೊಡುಗೆ ಏನು..?

Video Top Stories