ನಮ್ಮ ರಾಕೆಟ್‌ಗಳ ಸಾಮರ್ಥ್ಯ ಅರಿತ ಇತರ ರಾಷ್ಟ್ರಗಳು ನಮ್ಮ ಬಳಿ ಬರುತ್ತಿವೆ: ವಿಜ್ಞಾನಿ ಗುರು ಪ್ರಸಾದ್‌

ಮುಂದಿನ 14 ದಿನ ರಾಸಾಯನಿಕ ಸಂಯೋಜನೆ, ಮಿನರಲ್ಸ್‌, ಕಂಪನ ಇತರ ವಿಷಯಗಳ ಬಗ್ಗೆ ಪ್ರಗ್ಯಾನ್‌ ರೋವರ್‌ ಅಧ್ಯಯನ ನಡೆಸಲಿದೆ ಎಂದು ವಿಜ್ಞಾನಿ ಗುರು ಪ್ರಸಾದ್‌ ಹೇಳಿದರು.

Share this Video
  • FB
  • Linkdin
  • Whatsapp

ಚಂದ್ರಯಾನ-3 ಯಶಸ್ವಿಯಾಗಿ ಪೂರೈಸಿ ಭಾರತದ ಬಗ್ಗೆ ಜಗತ್ತೇ ನಿಬ್ಬೆರಗಾಗುವಂತೆ ಮಾಡಿದ ಇಸ್ರೋ ವಿಜ್ಞಾನಿಗಳ ತಂಡದಲ್ಲಿ ಕನ್ನಡಿಗ ವಿಜ್ಞಾನಿಗಳ ಪಾತ್ರ ಮಹತ್ವದ್ದಾಗಿದೆ. ಇಸ್ರೋ ವಿಜ್ಞಾನಿಗಳ ತಂಡದಲ್ಲಿ ಹಲವಾರು ಕನ್ನಡಿಗ ವಿಜ್ಞಾನಿಗಳು ಹಗಲಿರುಳು ಶ್ರಮಿಸಿದ್ದಾರೆ. ಈ ಬಗ್ಗೆ ವಿಜ್ಞಾನಿ ಗುರು ಪ್ರಸಾದ್‌(Scientist GuruPrasad) ಮಾತನಾಡಿದ್ದು, ವಿಕ್ರಮ್‌(Vikram) ಇಳುವ ಕೋಶದಲ್ಲಿ ಎಲ್ಲಾವೂ ಸರಿಯಾಗಿದೆ ಎಂದು ಖಾತ್ರಿ ಪಡಿಸಿಕೊಂಡ ನಂತರ ಪ್ರಗ್ಯಾನ್‌ ರೋವರ್‌(Pragyan Rover) ಕೆಳಗೆ ಇಳಿಯುತ್ತದೆ. ಇದರಲ್ಲಿ ಕೊನೆಯ ಎರಡು ಚಕ್ರದಲ್ಲಿ ಇಸ್ರೋದ ಚಿಹ್ನೆ, ಮತ್ತೊಂದರಲ್ಲಿ ಆಶೋಕ ಸ್ತಂಭ ಇದೆ. ಇದು ಚಂದ್ರನ ಮಣ್ಣಿನ ಮೇಲೆ ಮುದ್ರೆ ಒತ್ತುತ್ತದೆ ಎಂದು ವಿಜ್ಞಾನಿ ಗುರುಪ್ರಸಾದ್‌ ಹೇಳಿದರು. ನಂತರ ಇದು 14 ದಿನಗಳ ಕಾಲ ಅಧ್ಯಯನ ನಡೆಸಲಿದೆ. ಆ ನಂತರ ಸೂರ್ಯನ ಬೆಳಕು ಇರುವುದಿಲ್ಲ ಎಂದು ಅವರು ಹೇಳಿದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಚಂದ್ರನ ಮೇಲೆ ಪ್ರಗ್ಯಾನ್‌ ರೋವರ್‌ 14 ದಿನ ಅಧ್ಯಯನ: ಸಂಶೋಧನಾ ವರದಿಯತ್ತ ವಿಶ್ವದ ಚಿತ್ತ !

Related Video