Yuva Movie: ಶುರುವಾಯ್ತು ದೊಡ್ಮನೆ ಅಭಿಮಾನಿಗಳ 'ಯುವ' ಉತ್ಸವ..! ಹತ್ತಿರ ಆಗುತ್ತಿದೆ ಅಪ್ಪು ಫ್ಯಾನ್ಸ್ ಆಸೆ ಈಡೇರೋ ದಿನ..!

ಇಡೀ ಕನ್ನಡ ಸಿನಿ ಅಭಿಮಾನಿಗಳು ಕಾಯುತ್ತಿದ್ದ ದಿನ ಹತ್ತಿರವಾಗುತ್ತಿದೆ. ಎಲ್ಲಾ ಟಾಪ್ ಹೀರೋಗಳ ಫ್ಯಾನ್ಸ್ ವೇಟಿಂಗ್‌ನಲ್ಲಿರೋ ಸಿನಿಮಾ ರಿಲೀಸ್‌ಗೆ ಕೌಂಟ್‌ ಡೌನ್ ಸ್ಟಾರ್ಸ್  ಆಗಿದೆ. ಅದೇ ದೊಡ್ಮನೆ ಯುವ ರಾಜ್‌ಕುಮಾರ್ ನಟನೆಯ ಯುವ ಸಿನಿಮಾ. ಹೀಗಾಗಿ ದೊಡ್ಮನೆ ಅಭಿಮಾನಿಗಳು 'ಯುವ' ಉತ್ಸವಕ್ಕೆ ಸಜ್ಜಾಗುತ್ತಿದ್ದಾರೆ. 

Share this Video
  • FB
  • Linkdin
  • Whatsapp

ರಾಘವೇಂಧ್ರ ರಾಜ್ ಕುಮಾರ್ ಎರಡನೇ ಮಗ ಯುವ ರಾಜ್‌ಕುಮಾರ್‌ರನ್ನ(Yava Rajkumar) ಚಿತ್ರರಂಗಕ್ಕೆ ಪರಿಚಯಿಸೋ ಆಸೆ ದೊಡ್ಮನೆ ದೊರೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗಿತ್ತು. ಆದ್ರೆ ಅಪ್ಪುಗೆ ವಿಧಿ ಆ ಅವಕಾಶ ಕೊಡಲಿಲ್ಲ. ಈಗ ಯುವ ರಾಜ್‌ಕುಮಾರ್ ಅಪ್ಪುಗಾಗಿ ರೆಡಿಯಾಗಿದ್ದ ಕತೆಯಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾವೇ ಯುವ. ಈಗ ಯುವ ಸಿನಿಮಾದ(Yuva Movie) ಶೂಟಿಂಗ್ ಮುಗಿದೆ. ಯುವ ಶೂಟಿಂಗ್ ಕಪ್ಲೀಟ್ ಮಾಡಿದ್ದೇವೆ ಅಂತ ಇಡೀ ಚಿತ್ರತಂಡ ಸೇರಿ ಫೊಟೋ ಶೂಟ್ ಮಾಡಿ ಶೇರ್ ಮಾಡಿದೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್‌ಗೆ(Puneeth Rajkumar) ಮಾರ್ಚ್ 17ಕ್ಕೆ ಹುಟ್ಟುಹಬ್ಬ. ಈ ಬರ್ತ್ಡೇಯನ್ನ ಸ್ಪೆಷಲ್ಆಗಿಸೋಕೆ ಯುವ ಸಿನಿಮಾ ಟೀಂ ಸ್ಪೆಷಲ್ ಟ್ರೀಟ್ ಒಂದನ್ನ ರೆಡಿ ಮಾಡಿದೆ. ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್ ಹುಟ್ಟುಹಬ್ಬದಂದು 'ಯುವ' ಪ್ರೀ ರಿಲೀಸ್ ಈವೆಂಟ್ ನಡೆಯುತ್ತಿದೆ. ಅದೇ ದಿನ ಯುವ ಟ್ರೈಲರ್ ರಿಲೀಸ್(Trailer release) ಆಗಲಿದೆ. ಇದು ಯುವ ರಾಜ್ ಕುಮಾರ್ ಚಿತ್ರರಂಗ ಎಂಟ್ರಿಯ ಮೊದಲ ಸಿನಿಮಾ. ಹೀಗಾಗಿ ಯುವ ಸಿನಿಮಾದ ಪ್ರಚಾರ ದೊಡ್ಡಮಟ್ಟದಲ್ಲಿ ಮಾಡೋದಕ್ಕೆ ಪ್ಲಾನ್ ರೆಡಿಯಾಗಿದೆ. ಕರ್ನಾಟಕದ ನಾಲ್ಕು ಬೇರೆ ಬೇರೆ ಜಿಲ್ಲೆಗಳಲ್ಲಿ ಅದ್ಧೂರಿ ಕಾರ್ಯಕ್ರಮ ಮಾಡೋದಕ್ಕೆ ತಯಾರಿ ಆಗಿದೆ. ಇದೇ ಮಾರ್ಚ್ 2ರಂದು 'ಯುವ' ಟೈಟಲ್ ಸಾಂಗ್ ಚಾಮರಾಜನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ರಿಲೀಸ್‌ ಮಾಡಲಾಗುತ್ತಿದೆ.'ಯುವ' ಪ್ಯಾನ್ ಇಂಡಿಯಾ ಸಿನಿಮಾ. ಹಿಟ್ ಸಿನಿಮಾಗಳ ಡೈರೆಕ್ಟರ್ ಸಂತೋಷ್ ಆನಂದ್ ರಾಮ್ ಕನಸು ಯುವ ಸಿನಿಮಾ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಮ್ಯೂಸಿಕ್‌ ಶ್ರೀಶ ಕುದುವಳ್ಳಿ ಕ್ಯಾಮೆರಾ ಕುಸುರಿ ಇದೆ. ಹೊಂಬಾಳೆ ಬ್ಯಾನರ್‌ನಲ್ಲಿ ಸಿದ್ಧವಾಗಿರೋ ಯುವ ಇದೇ ಮಾರ್ಚ್ 28ಕ್ಕೆ ತೆರೆಗೆ ಬರಲಿದೆ. 

ಇದನ್ನೂ ವೀಕ್ಷಿಸಿ: ಬಾಲಿವುಡ್ ಚಿತ್ರರಂಗಕ್ಕೆ ಭಯ ಹುಟ್ಟುಸಿದ್ದ ಯಶ್..! ಸೌತ್ ಚಿತ್ರರಂಗದ ಮೇಲೆ ಹಿಂದಿ ಮಂದಿಗೆ ಮತ್ತೆ ನಡುಕ..!

Related Video