Yuva Movie: ಡೈಲಾಗ್, ಡ್ಯಾನ್ಸ್ ಆಕ್ಟಿಂಗ್‌ನಿಂದ ಚಿಂದಿ ಉಡಾಯಿಸಿದ ಯುವ! ಬಾಕ್ಸಾಫೀಸ್ ಹವಾ ಹೇಗಿದೆ ನೋಡಿ..?

ಕೊನೆಗೂ ಆ ದಿನ ಬಂದಿದ್ದಾಯ್ತು. ಯುವರಾಜನ ಪಟ್ಟಾಭೀಷೇಕ್.. ಯುವ ಸಿನಿಮಾ ಬಿಡುಗಡೆಯೊಂದಿಗೆ ಆಗಿದೆ. 'ಯುವ' ಥಿಯೇಟರ್‌ಗೆ ಲಗ್ಗೆ ಇಟ್ಟು  ಇದೀಗ ಬಾಕ್ಸಾಫೀಸ್ ಬೇಟೆ ಶುರು ಮಾಡಿದ್ದಾನೆ. ಮೊದಲ ದಿನವೇ ಯುವ ಕಲೆ ಕ್ಷನ್ 8 ಕೋಟಿ ಎನ್ನುತ್ತಿವೆ ಗಾಂಧಿನಗರ ಮೂಲಗಳು.

Share this Video
  • FB
  • Linkdin
  • Whatsapp

ಯುವ ಸಿನಿಮಾ(Yuva movie) ಸಕ್ಸಸ್‌ಫುಲ್‌.. ಹೌಸ್ ಫುಲ್ ಪ್ರದರ್ಶನ್ ಕಾಣುತ್ತಿದೆ. ವೀಕೆಂಡ್‌ನಲ್ಲೂ ಭರ್ಜರಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸಂತೋಷ್ ಆನಂದ್‌ರಾಮ್ ನಿರ್ದೇಶನ. ಅಜನೀಶ್ ಲೋಕನಾಥ್ ಮ್ಯೂಸಿಕ್ ಹೊಂಬಾಳೆ(Hombale Films) ನಿರ್ಮಾಣ, ಸಪ್ತಮಿಗೌಡ ನಾಯಕಿಯಾಗಿದ್ದ ಚಿತ್ರ ಯುವ. ಎಲ್ಲ ಕಮರ್ಷಿಯಲ್ ಎಲಿಮೆಂಟ್ಸ್ ಜೊತೆ ಕ್ಲಾಸ್ ಅಂಡ್ ಮಾಸ್ ಇಷ್ಟ ಪಡೋ ಕಥೆಯೊಂದಿಗೆ ಚಿತ್ರ ತೆರೆಕಂಡಿದೆ. ಫ್ಯಾಮಿಲಿ ಥಿಯೇಟರ್‌ಗೆ ನುಗ್ಗುತ್ತಿದ್ದು ಹೊಂಬಾಳೆ ಖಜಾನೆ ತುಂಬಿಸ್ತಿದೆ. ಯುವ ಮೊದಲ ಚಿತ್ರ ಸಕ್ಸಸ್ ಕಂಡಿದ್ದು ಇಡೀ ರಾಜ್ ಕುಟುಂಬಕ್ಕೆ ಬೂಸ್ಟ್ ಸಿಕ್ಕಂತಾಗಿದೆ. ಸಂಭ್ರಮದ ಅಲೆಯಲ್ಲಿ ತೇಲಾಡಿದೆ ರಾಜ್ ಕುಟುಂಬ. ಯುವ(Yuva Movie) ನಟನೆಗೆ ಸಿನಿರಸಿಕರು ಫಿದಾ ಆಗಿದ್ದು, ಯುವನಲ್ಲಿ ಅಪ್ಪುವನ್ನು ನೋಡಿಕೊಂಡಿದ್ದಾರೆ. ಬಾಕ್ಸಾಫೀಸ್ ಬೇಟೆ ಹೀಗೆ ಮುಂದುವರಿಯಲಿ ಅನ್ನೋದು ದೊಡ್ಮನೆ ಅಭಿಮಾನಿಗಳ ಹಾರೈಕೆ.

ಇದನ್ನೂ ವೀಕ್ಷಿಸಿ:  Yogi Adityanath: ಯೋಗಿಯ ನಯಾ ಉತ್ತರ ಪ್ರದೇಶ..! ರಕ್ತಸಿಕ್ತ ರಾಜ್ಯದಲ್ಲಿ ನಿರ್ಭೀತ ವಾತಾವರಣ..!

Related Video