Asianet Suvarna News Asianet Suvarna News

ದೊಡ್ಮನೆ ಕುಡಿ ಯುವ ಸಿನಿಮಾಗೆ ಭಾರಿ ಡಿಮ್ಯಾಂಡ್..! ಅಧಿಕ ಮೊತ್ತಕ್ಕೆ ಸೇಲ್ ಆಯ್ತು "ಯುವ" ಆಡಿಯೋ ಹಕ್ಕು..!

ಇಡೀ ಕನ್ನಡ ಸಿನಿ ಅಭಿಮಾನಿಗಳು ಕಾಯುತ್ತಿದ್ದ ದಿನ ಹತ್ತಿರವಾಗುತ್ತಿದೆ. ಎಲ್ಲಾ ಟಾಪ್ ಹೀರೋಗಳ ಫ್ಯಾನ್ಸ್ ವೇಟಿಂಗ್‌ನಲ್ಲಿರೋ ಸಿನಿಮಾ ರಿಲೀಸ್‌ಗೆ ಕೌಟ್ ಡೌನ್ ಸ್ಟಾರ್ಸ್ ಆಗಿದೆ. ಆದ್ರೆ ಆ ಸಿನಿಮಾ ರಿಲೀಸ್ ಆಗೋ ಮೊದಲೇ ಒಂದೊಂದೇ ರೆಕಾರ್ಡ್ ಮಾಡುತ್ತಿದ್ದೆ. ಆ ಸಿನಿಮಾವೇ ದೊಡ್ಮನೆ ಯುವ ರಾಜ್‌ಕುಮಾರ್ ನಟನೆಯ ಯುವ. 

ಯುವ ರಾಜ್ ಕುಮಾರ್ ಮೇಲೆ ಇಡೀ ಚಿತ್ರರಂಗದ ಚಿತ್ರ ಪ್ರೇಮಿಗಳ ಕಣ್ಣಿದೆ. ಯುವ ತೆರೆ ಮೇಲೆ ಹೇಗೆ ವಿಜೃಂಬಿಸುತ್ತಾರೆ.? ಯುವ ದರ್ಬಾರ್ ಹೇಗಿರುತ್ತೆ ಅನ್ನೋ ಕುತೂಹಲ ಎಲ್ಲರಲ್ಲೂ ಇದೆ. ಹೀಗಾಗಿ ಒಂದೊಂದೇ ವಿಷಯಗಳಲ್ಲಿ ರೆಕಾರ್ಡ್ ಬರೆಯೋಕೆ ಶುರು ಮಾಡಿದೆ ಯುವ ಸಿನಿಮಾ. ಯುವ ರಾಜ್ ಕುಮಾರ್(Yuva Rajkumar) ಡೆಬ್ಯೂ ಆಗ್ತಿರೋ ಮೊದಲ ಸಿನಿಮಾ ಯುವ ಚಿತ್ರಕ್ಕೆ(Yuva Movie) ಭಾರಿ ಡಿಮ್ಯಾಂಡ್ ಕ್ರಿಯೆಟ್ ಆಗಿದೆ. ಈ ಸಿನಿಮಾದ ಆಡಿಯೋ ಹಕ್ಕು ಅಧಿಕ ಮೊತ್ತಕ್ಕೆ ಸೇಲ್ ಆಗಿದೆ. "ಕೆ.ಜಿ.ಎಫ್", "ಕಾಂತಾರ" ದಂತಹ ಯಶಸ್ವಿ ಸಿನಿಮಾಗಳನ್ನ ಕೊಟ್ಟಿರೋ ಹೊಂಬಾಳೆ ಫಿಲ್ಮ್ಸ್‌(Hombale Films) ಮತ್ತೊಂದು ಅದ್ದೂರಿ ಕನ್ನಡ ಚಿತ್ರ "ಯುವ". ಈ ಸಿನಿಮಾವನ್ನ ಪುನೀತ್ ರಾಜಕುಮಾರ್ ಅಭಿನಯದ "ರಾಜಕುಮಾರ" ಚಿತ್ರ ನಿರ್ದೇಶಿಸಿದ್ದ ಸಂತೋಷ್ ಆನಂದರಾಮ್ ಆಕ್ಷನ್ ಕಟ್ ಹೇಳಿದ್ದಾರೆ. ಹೀಗಾಗಿ ಯುವ ಸಿನಿಮಾದ ಮೇಲೆ ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಇದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ಸುಮಧುರ ಹಾಡುಗಳು "ಯುವ" ಚಿತ್ರದಲ್ಲಿದ್ದು,ಕನ್ನಡದ ಹೆಸರಾಂತ ಆಡಿಯೋ ಸಂಸ್ಥೆ ಆನಂದ್ ಆಡಿಯೋ ಬಾರಿ ಮೊತ್ತಕ್ಕೆ ಆಡಿಯೋ ಹಕ್ಕನ್ನು ಖರೀದಿ ಮಾಡಿದೆ. ಇತ್ತೀಚೆಗಷ್ಟೇ ಬಹು ನಿರೀಕ್ಷಿತ "ಯುವ" ಚಿತ್ರದ ಚಿತ್ರೀಕರಣ ಪೂರ್ಣವಾಗಿದ್ದು, ಮಾರ್ಚ್ 29 ರಂದು ತೆರೆ ಕಾಣಲಿದೆ. ಯುವ ಹಾಡುಗಳು ಮಾರ್ಚ್ ಮೊದಲ ವಾರದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಟ್ರೇಲರ್ ಅಪ್ಪು ಹುಟ್ಟುಹಬ್ಬಕ್ಕೆ ಹೊರ ಬರಲಿದೆ.

ಇದನ್ನೂ ವೀಕ್ಷಿಸಿ:  Bheemaa movie: ವಿಜಯ್ ಅಡ್ಡಾದಿಂದ 'ಭೀಮ' ಮೇಕಿಂಗ್ ಔಟ್ ! ಸಿನಿಮಾ ಶೂಟಿಂಗ್ ಕಂಪ್ಲೀಟ್-ಪೋಸ್ಟ್ ಪ್ರೊಡಕ್ಷನ್ ಶುರು..!