Bheemaa movie: ವಿಜಯ್ ಅಡ್ಡಾದಿಂದ 'ಭೀಮ' ಮೇಕಿಂಗ್ ಔಟ್ ! ಸಿನಿಮಾ ಶೂಟಿಂಗ್ ಕಂಪ್ಲೀಟ್-ಪೋಸ್ಟ್ ಪ್ರೊಡಕ್ಷನ್ ಶುರು..!

ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್ ‘ಭೀಮ’ನ ಅಖಾಡದಲ್ಲಿ ಏನಾಗ್ತಿದೆ..? ಆ್ಯಕ್ಟರ್ ಅಷ್ಟೇ ಅಲ್ಲ. ತಾನು ಬೆಸ್ಟ್ ಡೈರೆಕ್ಟರ್ ಕೂಡ ಅಂತ ಪ್ರೂವ್ ಮಾಡಿರೋ ವಿಜಯ್ ಭೀಮ ಚಿತ್ರೀಕರಣ ಮುಗಿಸಿದ್ರಾ..? ಅದಕ್ಕೆಲ್ಲಾ ಆನ್ಸರ್ ಆಗಿ ಭೀಮನ ಅಡ್ಡದಿಂದ ಸ್ಪೆಷಲ್ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ.

Share this Video
  • FB
  • Linkdin
  • Whatsapp

ದುನಿಯಾ ವಿಜಯ್ ತಮ್ಮ ಭೀಮ ಕಥೆಯನ್ನ ಚೆನ್ನಾಗಿಯೇ ಮಾಡಿಕೊಂಡಿದ್ದಾರೆ. ಹೀಗಾಗಿ ಚಿತ್ರವನ್ನ ರಿಯಲಿಸ್ಟಿಕ್ ಜಾಗಗಳಲ್ಲಿಯೇ ಶೂಟಿಂಗ್ ಮಾಡಿದ್ದಾರೆ. ಸಿನಿಮಾದ ಒಂದೊಂದು ಫ್ರೇಮ್ ಕೂಡ ಅದ್ಭುತವಾಗಿರುತ್ತೆ ಅನ್ನೋದು ಮೇಕಿಂಗ್‌ ನೋಡಿದ್ರೆ ಒಂದು ಅಂದಾಜು ಬರುತ್ತದೆ. ಶೂಟಿಂಗ್ (Shooting) ಹಂತದಲ್ಲೇ ‘ಭೀಮ’(Bheemaa Movie) ಮಾಡ್ತಿರುವ ಅಬ್ಬರ ಅಷ್ಟಿಷ್ಟಲ್ಲ. ಆಗೊಂದು ಈಗೊಂದು ಬರುವ ಪಂಚಿಂಗ್ ಸಾಂಗ್ಸ್ ಭೀಮನ ನಿರೀಕ್ಷೆ ದುಪ್ಪಟ್ಟು ಮಾಡಿದೆ. ಆಫ್ಟರ್ ‘ಸಲಗ’ ಸಕ್ಸಸ್ ಭೀಮನಾಗಿ ವಿಜಯ್(Duniya Vijay) ಸಾಹಸ ಅಷ್ಟಿಷ್ಟಲ್ಲ. ನೈಜತೆಗೆ ಹೆಚ್ಚು ಒತ್ತು ಕೊಡುವ ವಿಜಯ್ ಲೋಕಲ್ ಏರಿಯಾಗಳಲ್ಲೇ ಚಿತ್ರೀಕರಣ ಮಾಡಿದ್ದಾರೆ. ವಿಜಯ್ ವರ್ಕಿಂಗ್ ಸ್ಟೈಲ್‌ನ ಝಲಕ್ ಇಲ್ಲಿ ಸಿಗುತ್ತೆ. ಈ ಚಿತ್ರದಲ್ಲಿ ಹಲವು ಕ್ಯಾರೆಕ್ಟರ್‌ಗಳೂ ರಿಲೀಲ್ ಆಗಿವೆ. ನಿರ್ಮಾಪಕ ಕೃಷ್ಣ ಸಾರ್ಥಕ್ ಬಂಡವಾಳ ಹೂಡಿರೋ ಭೀಮ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಚರಣ್ ರಾಜ್ ಮ್ಯೂಸಿಕ್ ಈ ಸಿನಿಮಾದ ಹೈಲೆಟ್. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು, ಸಧ್ಯದಲ್ಲೇ ಭೀಮಾ ಬಿಡುಗಡೆ ದಿನಾಂಕ ಕೂಡ ಫಿಕ್ಸ್ ಆಗುತ್ತೆ.

ಇದನ್ನೂ ವೀಕ್ಷಿಸಿ: Today Horoscope: ಇಂದು ಭಾರತ ಹುಣ್ಣಿಮೆ ಇದ್ದು, ಸವದತ್ತಿ ಯಲ್ಲಮ್ಮನ ಸ್ಮರಣೆ ಮಾಡಿ

Related Video