ಬಾಲ ಹನುಮಾನ್ ಥೀಮ್‌ನಲ್ಲಿ ಯಶ್ ಮಗನ ಬರ್ತ್ ಡೇ! ಯಥರ್ವ್ ಹುಟ್ಟುಹಬ್ಬದ ವಿಡಿಯೋ ಹಂಚಿಕೊಂಡ ರಾಧಿಕಾ!

ಯಶ್ ರಾಧಿಕಾ ದಂಪತಿಯ ಮುದ್ದಾದ ಮಗ ಯಥರ್ವ್ ಯಶ್  ಹುಟ್ಟುಹಬ್ಬ ಇತ್ತೀಚೆಗಷ್ಟೆ ನಡೆದಿದ್ದು, ಮಗನ ಹುಟ್ಟುಹಬ್ಬವನ್ನು ಬಾಲಹನುಮಾನ್ ಥೀಮ್‌ನಲ್ಲಿ ಕುಟುಂಬ ಆಚರಿಸಿದೆ. ಮಗನ ಹುಟ್ಟುಹಬ್ಬದಲ್ಲಿ ಮಕ್ಕಳ ಜೊತೆ ಮಕ್ಕಳಾಗಿ ಯಶ್ ರಾಧಿಕಾ ಕುಣಿದು ಕುಪ್ಪಳಿಸಿದ್ದಾರೆ.
 

First Published Nov 19, 2023, 9:05 AM IST | Last Updated Nov 19, 2023, 9:05 AM IST

ರಾಧಿಕಾ ವಿಡಿಯೋದಲ್ಲಿ ಸಖತ್ ಗ್ಲ್ಯಾಮರಸ್ಸಾಗಿ ಕಾಣಿಸಿಕೊಂಡಿದ್ದಾರೆ. ರಾಧಿಕಾ ಪಂಡಿತ್(Radhika Pandit) ಡ್ಯಾನ್ಸ್ ನೋಡಿ ಅತ್ತಿಗೆ ಚಾರ್ಮ್ ಕಿಂಚಿತ್ತು ಕಮ್ಮಿ ಆಗಿಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಐರಾ(Ayra yash) ರಾಧಿಕಾ ಡ್ಯಾನ್ಸ್(Dance) ಸಖತ್ ಕ್ಯೂಟ್ ಎಂದು ಹೇಳುತ್ತಿದ್ದಾರೆ. ಯಶ್ ಎಂದಿನ ತಮ್ಮ ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ್ದಾರೆ. ಬಿಳಿ ಶರ್ಟ್, ಕಪ್ಪು ಪ್ಯಾಂಟ್ ತೊಟ್ಟು ಕಾಣಿಸಿಕೊಂಡಿದ್ದಾರೆ. ರಾಧಿಕಾ ಡಿಸೈನರ್ ಸಲ್ವಾರ್ನಲ್ಲಿ ಕಂಗೊಳಿಸಿದ್ದಾರೆ. ಯಶ್(Yash) ಸಹೋದರಿ ನಂದಿನಿ, ಸಾನಿಯಾ ಸರ್ದಾರಿಯಾ ಪಾರ್ಟಿಯಲ್ಲಿ ಭಾಗಿ ಆಗಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಬರ್ತ್ ಡೇ ಅಂಗವಾಗಿ ಐರಾ, ಯಥರ್ವ್ ಸ್ನೇಹಿತರಿಗಾಗಿ ವಿವಿಧ ಆಟಗಳನ್ನು ಆಯೋಜಿಸಲಾಗಿತ್ತು. ಕರೊಸಲ್ ಕುದುರೆ ಏರಿ ಯಥರ್ವ್ ಬಹಳ ಎಂಜಾಯ್ ಮಾಡಿದ್ದಾನೆ. ತಮ್ಮನ ಬರ್ತ್ಡೇ ಪಾರ್ಟಿಯಲ್ಲಿ ಐರಾ ಸಂಭ್ರಮಕ್ಕೂ ಪಾರವೇ ಇರಲಿಲ್ಲ. ಸಿನಿಮಾ ಅಪ್ ಡೇಟ್ ಅಂತೂ ಸಿಗಲಿಲ್ಲ ಮಗನ ಬರ್ತ್ ಡೇ ವಿಡಿಯೋ ನೋಡಿಕೊಂಡು ಸಮಾಧಾನ ಪಟ್ಟುಕೊಳ್ಳಬೇಕಾಗಿದೆ ಎನ್ನುತ್ತಿದ್ದಾರೆ ರಾಕಿ ಫ್ಯಾನ್ಸ್.

ಇದನ್ನೂ ವೀಕ್ಷಿಸಿ:  ಸಿಲಿಕಾನ್‌ ಸಿಟಿಯಲ್ಲಿ 'ಕೃಷಿ ಲೋಕ'ದ ಅನಾವರಣ: ಜಿಕೆವಿಕೆಯಲ್ಲಿ ನೂರಾರು ಕೃಷಿ ಸಾಧಕರಿಗೆ ಸನ್ಮಾನ