ಸಿಲಿಕಾನ್‌ ಸಿಟಿಯಲ್ಲಿ 'ಕೃಷಿ ಲೋಕ'ದ ಅನಾವರಣ: ಜಿಕೆವಿಕೆಯಲ್ಲಿ ನೂರಾರು ಕೃಷಿ ಸಾಧಕರಿಗೆ ಸನ್ಮಾನ

ಸಿಲಿಕಾನ್ ಸಿಟಿಯ ಬ್ಯುಸಿ ಲೈಫ್, ವೇಗವಾಗಿ ಓಡ್ತಿರೋ ಜಗತ್ತಿನ ಮಧ್ಯೆ ಕೃಷಿ, ಕೃಷಿ ಸಂಬಂಧಿತ ಚಟುವಟಿಕೆಗಳನ್ನ ಮುಂದಿನ ತಲೆಮಾರಿಗೆ ತಲುಪಿಸೋ ಕೆಲಸವನ್ನ ಕೃಷಿ ವಿಶ್ವವಿದ್ಯಾಲಯ ಮಾಡ್ತಿದೆ. ಅದರ ಭಾಗವಾಗಿ ಪ್ರತಿವರ್ಷದಂತೆ ಈ ವರ್ಷವೂ ಕೃಷಿಮೇಳಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ.
 

Share this Video
  • FB
  • Linkdin
  • Whatsapp

ಬೆಂಗಳೂರು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ನಾಲ್ಕು ದಿನಗಳ ಕಾಲ ಕೃಷಿ ಮೇಳ(Krishi mela) ಆಯೋಸಲಾಗಿದೆ. ಆಹಾರ,ಆರೋಗ್ಯ, ಆದಾಯಕ್ಕಾಗಿ ಸಿರಿಧಾನ್ಯ ಅನ್ನೋ ಘೋಷಣೆ ಜತೆಗೆ ಈ ವರ್ಷದ ಕೃಷಿಮೇಳ ನಡೆಸಲಾಗ್ತಿದ್ದು, ಕೃಷಿಮೇಳಕ್ಕೆ ಸಿಎಂ ಸಿದ್ದರಾಮಯ್ಯ(Siddaramaiah), ಡಿಸಿಎಂ ಡಿ.ಕೆ.ಶಿವಕುಮಾರ್(D.K.Shivakumar) ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ(Chaluvarayaswamy) ಸೇರಿ ಹಲವರು ಚಾಲನೆ ನೀಡಿದ್ರು. ಜೊತೆಗೆ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ಹೊಸ ತಳಿಗಳ ಪ್ರಾತ್ಯಕ್ಷಿಕೆಗಳಿಗೆ ಭೇಟಿ ನೀಡಿ ವೀಕ್ಷಿಸಿದ್ರು. ಈ ಭಾರಿ ಕೃಷಿಮೇಳದಲ್ಲಿ ವಿವಿಧ ಭಾಗಗಳ ರೈತ ಸಾಧಕರಿಗೆ ಸನ್ಮಾನ ಮಾಡೋ ಜೊತೆಗೆ ರೈತರ ಜಮೀನುಗಳ ಮಣ್ಣು ಪರೀಕ್ಷೆಗೆ ಅಭಿವೃದ್ಧಿಪಡಿಸಿರೋ ಧರ್ತಿಮಿತ್ರ ಆಪ್ ಕೂಡ ಅನಾವರಣ ಮಾಡಲಾಯ್ತು. ಈ ಭಾರಿ ಕೃಷಿ ಮೇಳದಲ್ಲಿ ಸುಮಾರು 625 ಮಳಿಗೆಗಳನ್ನ ತೆರೆಯಲಾಗಿದ್ದು, ಈ ಬಾರಿ 10 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡುವ ಸಾಧ್ಯತೆ ಇದೆ. ಈ ಮೇಳದಲ್ಲಿ ರೈತರಿಗೆ ಕ್ಷೇತ್ರ ಸಂದರ್ಶನ, ಕೃಷಿ ವಿಜ್ಞಾನಿ, ತಜ್ಞರೊಂದಿಗೆ ಸಮಾಲೋಚನೆ, ಮಾರ್ಗದರ್ಶನ, ಪ್ರಾತ್ಯಕ್ಷಿಕೆ, ಹೊಸ ತಳಿಗಳ ಬಗ್ಗೆ ಮಾಹಿತಿ ಒದಗಿಸಲಾಗುತ್ತಿದೆ. ಇನ್ನು ಜಿಕೆವಿಕೆ ಸಂಶೋಧನಾ ವಿಭಾಗ ರಾಗಿ,ಸೂರ್ಯಕಾಂತಿ,ನವಣೆ, ಹಲಸು ಸೇರಿದಂತೆ ಕೆಲ ಸಿರಿಧಾನ್ಯಗಳ ತಳಿಗಳನ್ನ ಅಭಿವೃದ್ಧಿಪಡಿಸಿದ್ದು , ಸಿಎಂ ಸಿದ್ದರಾಮಯ್ಯ ಹೊಸ ತಳಿಗಳನ್ನ ಅನಾವರಣ ಮಾಡಿದ್ರು. ಇದರ ಜೊತೆಗೆ ಹೈನುಗಾರಿಕೆ ವಿಭಾಗದಲ್ಲಿ ವಿವಿಧ ಬಗೆಯ ಕೋಳಿಗಳು, ಕಲರ್ ಫುಲ್ ಮೀನುಗಳು, ಹಳ್ಳಿಕಾರ್ ಹೋರಿ ಗಮನಸೆಳೆದ್ರೆ, ಬಾಟಲ್ ಬದನೆ, ಚೆರ್ರಿ ಟೋಮ್ಯಾಟೋ ಹೀಗೆ ಹತ್ತು ಹಲವು ವೈಶಿಷ್ಟಗಳನ್ನ ಜನ ಕಣ್ತುಂಬಿಕೊಂಡ್ರು.

ಇದನ್ನೂ ವೀಕ್ಷಿಸಿ: ಸಿದ್ದರಾಮಯ್ಯಗೆ ಸಂಕಷ್ಟ ತಂದ ಹಲೋ ಅಪ್ಪಾಜಿ ವಿಡಿಯೋ, ಆರೋಪ-ಪ್ರತ್ಯಾರೋಪದ ಸುರಿಮಳೆ!

Related Video