KGF Chapter 2: : ರಾಕಿ ಭಾಯ್ ಚಿತ್ರದ ಟ್ರೇಲರ್‌ ರಿಲೀಸ್‌ಗೆ ಮುಹೂರ್ತ ಫಿಕ್ಸ್!

ಬಹುನಿರೀಕ್ಷಿತ 'ಕೆಜಿಎಫ್ ಚಾಪ್ಟರ್​ 2' ಸಿನಿಮಾದ ಟ್ರೇಲರ್​ ಬಿಡುಗಡೆಗೆ ಚಿತ್ರತಂಡ ದಿನಾಂಕ ನಿಗದಿ ಮಾಡಿದೆ. ಮಾರ್ಚ್​ 27ರಂದು ಟ್ರೇಲರ್​ ರಿಲೀಸ್​ ಮಾಡುವುದಾಗಿ ಅಧಿಕೃತವಾಗಿ ತಿಳಿಸಲಾಗಿದೆ.

Share this Video
  • FB
  • Linkdin
  • Whatsapp

'ರಾಕಿಂಗ್ ಸ್ಟಾರ್' ಯಶ್ (Yash) ಮತ್ತು ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಕಾಂಬಿನೇಷನ್‌ನ 'ಕೆಜಿಎಫ್ 2' (KGF 2) ಸಿನಿಮಾದ ಮೇಲೆ ಅಪಾರವಾದ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಸದ್ಯ 'ಕೆಜಿಎಫ್ 2' ಬಗ್ಗೆ ಒಂದು ಅಪ್‌ಡೇಟ್ ನೀಡಿದೆ ಚಿತ್ರತಂಡ. 'ಕೆಜಿಎಫ್ 2' ಟ್ರೇಲರ್ (Trailer) ಯಾವಾಗ ರಿಲೀಸ್ ಆಗಲಿದೆ ಎಂಬ ಪ್ರಶ್ನೆ ಹಲವರಲ್ಲಿ ಇತ್ತು. ಇದೀಗ ಅದಕ್ಕೂ ಉತ್ತರ ಸಿಕ್ಕಿದ್ದು, ಚಿತ್ರತಂಡ ಅಧಿಕೃತ ಮಾಹಿತಿ ಹೊರಹಾಕಿದೆ. ಯಶ್‌ ಅಭಿನಯದ 'ಕೆಜಿಎಫ್: ಚಾಪ್ಟರ್ 2' (KGF Chapter 2) ಟ್ರೇಲರ್ ಮಾರ್ಚ್ 27ರಂದು ಸಂಜೆ 6.40ಕ್ಕೆ ರಿಲೀಸ್ ಆಗಲಿದೆ. 

Add Asianetnews Kannada as a Preferred SourcegooglePreferred

KGF 2: ಇನ್ನೂ ಮುಗಿದಿಲ್ಲ ಯಶ್ 'ಕೆಜಿಎಫ್​ 2' ಚಿತ್ರದ ಚಿತ್ರೀಕರಣ!

'ಯಾವಾಗಲೂ ಕೂಡ ಮಿಂಚು ಬರುವ ಮುನ್ನ ಗುಡುಗು ಬರುತ್ತದೆ' ಎಂದು ಟ್ರೇಲರ್ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿದೆ ಚಿತ್ರತಂಡ. ಈ ಹಿಂದೆ ಯಶ್​ ಅವರ ಹುಟ್ಟುಹಬ್ಬಕ್ಕೆ 'ಕೆಜಿಎಫ್ 2' ಚಿತ್ರದ ಹೊಸ ಪೋಸ್ಟರ್​ವೊಂದು ರಿಲೀಸ್​ ಆಗಿತ್ತು. 'ಡೇಂಜರ್​ ಆಹೆಡ್' ಎಂಬ ಬರಹ ಬರೆದು ಪೋಸ್ಟರ್​ ರಿಲೀಸ್​ ಮಾಡಲಾಗಿತ್ತು. ಇನ್ನು ರವಿ ಬಸ್ರೂರ್ ಸಂಗಿತ ಸಂಯೋಜನೆ 'ಕೆಜಿಎಫ್ 2' ಚಿತ್ರಕ್ಕಿದ್ದು, ಪ್ರಕಾಶ್ ರಾಜ್, ಬಾಲಿವುಡ್ ನಟ ಸಂಜಯ್ ದತ್, ತೆಲುಗು ನಟ ರಾವ್ ರಮೇಶ್, ರವೀನಾ ಟಂಡನ್ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರಕ್ಕಿದೆ. 'ಕೆಜಿಎಫ್ 2'​ ಸಿನಿಮಾ ಏಪ್ರಿಲ್​ 14ಕ್ಕೆ ವಿಶ್ವದಾದ್ಯಾಂತ‌ ಏಕಕಾಲದಲ್ಲಿ ಐದು ಭಾಷೆಗಳಲ್ಲಿ ತೆರೆ ಕಾಣಲಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video