ಸ್ಟಾರ್ ಡೈರೆಕ್ಟರ್ ಜೊತೆ ಯಶ್ ಮುಂದಿನ ಸಿನಿಮಾ, 800 ಕೋಟಿ ಬಜೆಟ್..!

ರಾಕಿಂಗ್ ಸ್ಟಾರ್ ಯಶ್  ಕೆಜಿಎಫ್ 2 (KGF 2) ಸಿನಿಮಾ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಮಿಂಚ್ತಿದ್ದಾರೆ. ಕೆಜಿಎಫ್ 2 ಸಕ್ಸಸ್ ನಂತ್ರ ಯಶ್ ಯಾವ ಚಿತ್ರದಲ್ಲಿ ಆಕ್ಟ್ ಮಾಡ್ತಾರೆ ಅನ್ನೋ ಕ್ಯೂರಿಯಾಸಿಟಿ ಅಭಿಮಾನಿಗಳಿಗಿದೆ. ಅದೇ ರೀತಿ ರಾಕಿಂಗ್ ಸ್ಟಾರ್ ಮುಂದೆ ಸಾಲು ಸಾಲು ಚಿತ್ರಗಳ ಆಫರ್ ಗಳಿದೆ. 

Share this Video
  • FB
  • Linkdin
  • Whatsapp

ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ 2 (KGF 2) ಸಿನಿಮಾ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಮಿಂಚ್ತಿದ್ದಾರೆ. ಕೆಜಿಎಫ್ 2 ಸಕ್ಸಸ್ ನಂತ್ರ ಯಶ್ ಯಾವ ಚಿತ್ರದಲ್ಲಿ ಆಕ್ಟ್ ಮಾಡ್ತಾರೆ ಅನ್ನೋ ಕ್ಯೂರಿಯಾಸಿಟಿ ಅಭಿಮಾನಿಗಳಿಗಿದೆ. ಅದೇ ರೀತಿ ರಾಕಿಂಗ್ ಸ್ಟಾರ್ ಮುಂದೆ ಸಾಲು ಸಾಲು ಚಿತ್ರಗಳ ಆಫರ್ ಗಳಿದೆ. ನರ್ತನ್ ಡೈರೆಕ್ಟ್ ಮಾಡೋ ಸಿನಿಮಾಗೆ ಕೆ ವಿ ಎನ್ ಸಂಸ್ಥೆ ಬಂಡವಾಳ ಹಾಕಲು ಸಿದ್ದವಾಗಿದ್ದು , ಅದಾದ ನಂತ್ರ ಟಾಲಿವುಡ್ ನ ಫೇಮಸ್ ನಿರ್ಮಾಪಕ ದಿಲ್ ರಾಜು 100 ಕೋಟಿ ಸಂಭಾವನೆ ಕೊಟ್ಟು ಸಿನಿಮಾ ಮಾಡಲು ಸಿದ್ದರಿದ್ದಾರೆ..ಈ ಸಾಲಿನಲ್ಲಿ ಈಗ ಕಾಲಿವುಡ್ ನ ಸ್ಟಾರ್ ಡೈರೆಕ್ಟರ್ ಕೂಡ ಸೇರಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ಯಶ್ ಅವ್ರ ಫೆವರೇಟ್ ಡೈರೆಕ್ಟರ್ ಶಂಕರ್ , ಯಶ್ ಚಿತ್ರಕ್ಕೆ ಡೈರೆಕ್ಷನ್ ಮಾಡಲು ನಿರ್ಧಾರ ಮಾಡಿದ್ದಾರಂತೆ. ಶಂಕರ್ ನಿರ್ದೇಶನದಲ್ಲಿ ಬರೋಬ್ಬರಿ 800 ಕೋಟಿ ಬಜೆಟ್ ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಯಶ್ ಆಲೋಚಿಸುತ್ತಿದ್ದಾರೆ ಎಂಬ ಮಾಹಿತಿಗಳು ಎಲ್ಲಡೆ ಹರಿದಾಡುತ್ತಿದೆ. ಸದ್ಯ ಶಂಕರ್, ರಾಮ್ ಚರಣ್ ಅವ್ರ ಸಿನಿಮಾ ನಿರ್ದೇಶನ ಮಾಡುತ್ತಿದ್ದು ಅದಾದ ನಂತ್ರ ಇಂಡಿಯನ್ 2 ಸಿನಿಮಾ ಮಾಡಬೇಕಿದೆ ..ಈ ಮಧ್ಯೆ ಯಶ್ ಸಿನಿಮಾ ಸುದ್ದಿ ಜೋರಾಗಿದೆ.

Related Video