ಆಪ್ತ ಸಹಾಯಕನ ಮಗುವಿಗೆ ಯಶ್ ದಂಪತಿ ದುಬಾರಿ ಗಿಫ್ಟ್‌: ಚಿನ್ನದ ಸರ ಗಿಫ್ಟ್ ಕೊಟ್ಟ ರಾಕಿ ಭಾಯ್!

ರಾಕಿಂಗ್ ಸ್ಟಾರ್ ಯಶ್ ದಂಪತಿ ತಮ್ಮ ಜತೆ ಕೆಲಸ ಮಾಡೋ ಆಪ್ತ ಸಹಾಯಕರನ್ನ ಮನೆಯವರಂತೆ ನೋಡಿಕೊಳ್ತಾರೆ. ಹೀಗಾಗೆ ಯಶ್ ಜೊತೆ ಇರೋ ಆಪ್ತ ಸಹಾಯಕರಾರು ಕೆಲಸ ಬೆಟ್ಟು ಹೋಗಿಲ್ಲ. ಯಶ್ ಜೊತೆ 10 ವರ್ಷದಿಂದಲೂ ಜೊತೆಯಲ್ಲೇ ಇದ್ದಾರೆ.
 

Share this Video
  • FB
  • Linkdin
  • Whatsapp

ರಾಕಿಂಗ್ ಸ್ಟಾರ್ ಯಶ್ ದಂಪತಿ ತಮ್ಮ ಜತೆ ಕೆಲಸ ಮಾಡೋ ಆಪ್ತ ಸಹಾಯಕರನ್ನ ಮನೆಯವರಂತೆ ನೋಡಿಕೊಳ್ತಾರೆ. ಹೀಗಾಗೆ ಯಶ್ ಜೊತೆ ಇರೋ ಆಪ್ತ ಸಹಾಯಕರಾರು ಕೆಲಸ ಬೆಟ್ಟು ಹೋಗಿಲ್ಲ. ಯಶ್ ಜೊತೆ 10 ವರ್ಷದಿಂದಲೂ ಜೊತೆಯಲ್ಲೇ ಇದ್ದಾರೆ. ಇದೀಗ ಕಳೆದ 10 ವರ್ಷಗಳಿಂದ ತಮಗೆ ಆಪ್ತ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಚೇತನ್ ಅವರ ಮನೆಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಭೇಟಿ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಚೇತನ್ ತಂದೆ ಆಗಿದ್ದು, ಯಶ್ ದಂಪತಿ ಚೇತನ್ ಮನೆಗೆ ಭೇಟಿ ನೀಡಿ ಮಗುವನ್ನ ಎತ್ತಿ ಆಡಿಸಿದ್ದಾರೆ. 

ಅಷ್ಟೆ ಅಲ್ಲ ಚೇತನ್ ಮಗುವಿಗೆ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಚೇತನ್ ದಂಪತಿಗೆ ಯಶ್ ದಂಪತಿ ಸರ್ಪ್ರೈಸ್ ನೀಡಿದ್ದಾರೆ. ಈ ಸರ್ಪ್ರೈಸ್ ನೋಡಿ ಚೇತನ್ ಕುಟುಂಬ ತುಂಬ ಖುಷಿ ಪಟ್ಟಿದೆ. ಇನ್ನು ಮಗು, ತಾಯಿ ಆರೋಗ್ಯ ವಿಚಾರಿಸಿದ ಯಶ್ ಅವರು ಮಗುವಿಗೆ ಬಂಗಾರದ ಸರವನ್ನು ಕೂಡ ಹಾಕಿದ್ದಾರೆ. ಕೆಲ ದಿನಗಳ ಹಿಂದೆ ಯಶ್ ಅವರು ತಮ್ಮ ಸೆಕ್ಯುರಿಟಿಯ ಜನ್ಮದಿನವನ್ನು ಆಚರಿಸಿದ್ದರು. ಈಗ ಅಸಿಸ್ಟಂಟ್ ಮನೆಗೆ ಭೇಟಿ ಕೊಡೋದನ್ನು ಮರೆತಿಲ್ಲ. ಯಶ್ ಅವರು ನಾಟಕ, ಧಾರಾವಾಹಿಗಳಲ್ಲಿ ನಟಿಸಿ ಇಂದು ನ್ಯಾಶನಲ್ ಸ್ಟಾರ್ ಆಗಿದ್ದಾರೆ. ಆದರೆ ಅವರು ಬಂದ ದಾರಿಯನ್ನು ಮರೆತಿಲ್ಲ.

Related Video