ಐರಾ ಬರ್ತಡೇ ವಿಡಿಯೋ ವೈರಲ್; ಸಾಬರಮತಿ ರಿಪೋರ್ಟ್ ವೀಕ್ಷಿಸಿದ ಪ್ರಧಾನಿ!
ಸಾಬರಮತಿ ರಿಪೋರ್ಟ್’ ವೀಕ್ಷಿಸಲಿದ್ದಾರೆ ಪ್ರಧಾನಿ ಮೋದಿ. ನಟಿ ಶೋಭಿತಾ ಶಿವಣ್ಣ ಸಾವಿಗೆ ಖಿನ್ನತೆ ಕಾರಣನಾ? ಪೊಲೀಸರ ಕೈ ಸೇರಿದ ನಟಿ ಶೋಭಿತಾ ಡೆತ್ ನೋಟ್
ರಾಕಿಂಗ್ ಸ್ಟಾರ್ ಯಶ್ ಮತ್ತು ಸಿಂಡ್ರೆಲಾ ರಾಧಿಕಾ ಪಂಡಿತ್ ಮುದ್ದಾದ ಮಗಳು ಐರಾ ಇಂದು 6ನೇ ವರ್ಷಕ್ಕೆ ಕಾಲಿಟ್ಟಿದ್ದಾಳೆ. ರಾಕಿಂಗ್ ಸ್ಟಾರ್ ಮನೆಯಲ್ಲಿ ಇವತ್ತು ಸೆಲೆಬ್ರೆಶನ್ ಜೋರಾಗಿದೆ.ನವೆಂಬರ್ 15ರಂದು ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರ ರಿಲೀಸ್ ಆದ ಬಳಿಕ ಪ್ರಧಾನಿ ಮೋದಿ ಚಿತ್ರದ ಬಗ್ಗೆ ಮಾತನಾಡಿದ್ದರು.2002ರ ಫೆಬ್ರವರಿ 27ರಂದು ಕರಸೇವಕರು ಪ್ರಯಾಣ ಮಾಡುತ್ತಿದ್ದ ಸಾಬರಮತಿ ಎಕ್ಸ್ಪ್ರೆಸ್ ರೈಲಿನ ಎಸ್-6 ಕೋಚ್ಗೆ ಗುಜರಾತ್ನ ಗೋದ್ರಾ ಬಳಿ ಬೆಂಕಿ ಹಚ್ಚಲಾಗಿತ್ತು. ಇದು ಗುಜರಾತ್ನಲ್ಲಿ ಕೋಮುಗಲಭೆ ಕಾರಣ ಆಗಿತ್ತು. ಈ ಘಟನೆ ಆಧರಿಸಿದ ಸಿನಿಮಾ ‘ದಿ ಸಾಬರಮತಿ ಎಕ್ಸ್ಪ್ರೆಸ್’.ಕನ್ನಡ ಕಿರುತೆರೆ ಮತ್ತು ಸಿನಿಮಾಗಳಲ್ಲಿ ಸಕ್ರಿಯರಾಗಿದ್ದ ನಟಿ ಶೋಭಿತಾ ಶಿವಣ್ಣ ಹೈದರಾಬಾದ್‌ನಲ್ಲಿ ಸಾವನ್ನಪ್ಪಿದ್ದಾರೆ. ಹೈದರಾಬಾದ್‌ನಲ್ಲಿಯೇ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬದವರು, ಸ್ನೇಹಿತರು ಶಾಕ್ಗೆ ಒಳಗಾಗಿದ್ದಾರೆ.