ಅಭಿಮಾನಿಗಳ ಸಾವು, ಶಾಕ್‌ನಲ್ಲಿ ಯಶ್..! ಕುಟುಂಬಸ್ಥರಿಗೆ ನಟನ ಸಾಂತ್ವಾನ..!
ಯಶ್ ಹುಟ್ಟುಹಬ್ಬದ ದಿನ ನಡೀತು ದೊಡ್ಡ ದುರಂತ..!
ಯಶ್ ಕಟೌಟ್ ನಿಲ್ಲಿಸುವಾಗ ಕರೆಂಟ್ ಶಾಕ್ 3 ಬಲಿ..!
ಅಭಿಮಾನಿಗಳ ಸಾವು, ಶಾಕ್‌ನಲ್ಲಿ ರಾಕಿಂಗ್ ಯಶ್..!
ರಾಕಿಂಗ್ ಸ್ಟಾರ್ ಯಶ್ 38ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಕೆಜಿಎಫ್ ಬಂದ ಮೇಲೆ ಫ್ಯಾನ್ಸ್(Fans) ಭೇಟಿ ಮಾಡೋದನ್ನ ನಿಲ್ಲಿಸಿರೋ ಯಶ್ ಈ ವರ್ಷವೂ ಫ್ಯಾನ್ಸ್ ಭೇಟಿಗೆ ಬ್ರೇಕ್ ಹಾಕಿದ್ರು. ಅಭಿಮಾನಿಗಳ ಅಭಿಮಾನ ನಿಲ್ಲಬೇಕಲ್ಲ. ಅದನ್ನ ನಿಲ್ಲಿಸೋಕೆ ಯಾರಿದಂಲೂ ಸಾಧ್ಯವಿಲ್ಲ. ಈ ಅಭಿಮಾನ ಯಶ್(Yash) ಹುಟ್ಟುಹಬ್ಬದ(Birthday) ದಿನವೇ ಮೂರು ಜನರನ್ನ ಬಲಿ ಪಡೆದಿದೆ. ಯಶ್ ಕಟೌಟ್(Yash cutout) ನಿಲ್ಲಿಸಲು ಹೋಗಿ ಕರೆಂಟ್ ಶಾಕ್‌ನಿಂದ(Current shock) ಯಶ್‌ರ ಮೂರು ಜನ ಅಭಿಮಾನಿಗಳು ಬಲಿಯಾಗಿದ್ದಾರೆ. ತನ್ನ ಹುಟ್ಟುಹಬ್ಬದ ಸೆಲೆಬ್ರೇಷನ್‌ಗೆ ಹೋಗಿ ಅಭಿಮಾನಿಗಳು ಬಲಿ ಆಗಿದ್ದಕ್ಕೆ ನಟ ಯಶ್ ಶಾಕ್‌ನಲ್ಲಿದ್ದಾರೆ. ಹೀಗಾಗಿ ಅಭಿಮಾನಿ ಕುಟುಂಬಗಳ ನೋವಲ್ಲಿ ನಾನು ಭಾಗಿದಾರ ಅಂತ ಆ ಕುಟುಂಬಗಳಿಗೆ ಸಾಂತ್ವಾನ ಹೇಳೋ ಕೆಲಸವನ್ನ ಯಶ್ ಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: Radhika Kumaraswamy: ‘ಯಾರೆಲೆ ನಿನ್ನ ಮುದ್ದು ಗಂಡ’ ಹಾಡಿಗೆ ರಾಧಿಕಾ ಸಖತ್ ಡ್ಯಾನ್ಸ್..!