ಯಶ್ 19 ಬಗ್ಗೆ ಕೊನೆಗೂ ಅನೌನ್ಸ್ ಮಾಡದ ಯಶ್: ಬೇಸರ ಹೊರಹಾಕಿದ ಅಭಿಮಾನಿಗಳು !
ದೀಪಾವಳಿಗೆ ಯಶ್ 19 ಸಿನಿಮಾದ ಬಗ್ಗೆ ಯಶ್ ಏನಾದ್ರೂ ಅನೌನ್ಸ್ ಮಾಡಬಹುದು ಎಂದು ಅಭಿಮಾನಿಗಳು ಕಾಯುತ್ತಿದ್ದರು. ಆದ್ರೆ ಚಿತ್ರತಂಡ ಫ್ಯಾನ್ಸ್‌ಗೆ ಬೇಸರವನ್ನು ಉಂಟು ಮಾಡಿದೆ.
ರಾಕಿ ಭಾಯ್ ಯಶ್ ಫ್ಯಾನ್ಸ್ ಎಲ್ಲಾ ಮತ್ತೆ ಬೇಜಾರಾಗಿದ್ದಾರೆ. ಯಶ್(Yash) ದೀಪಾವಳಿ(Diwali) ಹಬ್ಬಕ್ಕಾದ್ರೂ ಒಳ್ಳೆ ಸುದ್ದಿ ಕೊಡ್ತಾರೆ ಎಂದು ಫ್ಯಾನ್ಸ್ ಕಾಯುತ್ತಿದ್ದರು. ಯಶ್ 19 ಸಿನಿಮಾ ಬಗ್ಗೆ ಅನೌನ್ಸ್ ಮಾಡ್ತಾರೆ ಎಂದು ಫ್ಯಾನ್ಸ್(Fans) ಕಾಯುತ್ತಿದ್ರು. ಆದ್ರೆ ಮುಂದಿನ ಸಿನಿಮಾ ಬಗ್ಗೆ ಏನನ್ನೂ ಹೇಳಿಲ್ಲ. ಹೀಗಾಗಿ ಅವರ ಫ್ಯಾನ್ಸ್ ಸಖತ್ ಬೇಜಾರು ಮಾಡಿಕೊಂಡಿದ್ದಾರೆ. ಯಶ್ ನಟನೆಯ ಹೊಸ ಸಿನಿಮಾದ (New Movie) ಕುರಿತಂತೆ ದಿನಕ್ಕೊಂದು ಸುದ್ದಿ ಹೊರ ಬರುತ್ತಿದ್ದರೂ, ಅಧಿಕೃತವಾಗಿ ಚಿತ್ರತಂಡ ಯಾವುದೇ ಮಾಹಿತಿ ಹೊರ ಹಾಕುತ್ತಿಲ್ಲ. ಈಗಾಗಲೇ ಕಥೆ ಲಾಕ್ ಆಗಿದ್ದು, ಡಿಸೆಂಬರ್ 23ರಿಂದ ಚಿತ್ರೀಕರಣಕ್ಕೆ ಹೋಗಲು ಚಿತ್ರತಂಡ ರೆಡಿಯಾಗಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ. ಆದ್ರೆ ಯಾವುದು ಅಧಿಕೃತವಾಗಿಲ್ಲ, ಹೀಗಾಗಿ ಯಶ್ ಅಭಿಮಾನಿಗಳು ಸಖತ್ ಸ್ಯಾಡ್ ಆಗಿದ್ದಾರೆ.
ಇದನ್ನೂ ವೀಕ್ಷಿಸಿ: ರಶ್ಮಿಕಾ ಮತ್ತೊಂದು ಡೀಪ್ ಫೇಕ್ ವಿಡಿಯೋ ವೈರಲ್! ಕೇಂದ್ರ ಸರ್ಕಾರದ ಆದೇಶಕ್ಕೂ ಖದೀಮರು ಡೋಂಟ್ ಕೇರ್!