ರಶ್ಮಿಕಾ ಮತ್ತೊಂದು ಡೀಪ್ ಫೇಕ್ ವಿಡಿಯೋ ವೈರಲ್! ಕೇಂದ್ರ ಸರ್ಕಾರದ ಆದೇಶಕ್ಕೂ ಖದೀಮರು ಡೋಂಟ್ ಕೇರ್!
ತಂತ್ರಜ್ನಾನ ಏನೆಲ್ಲಾ ಆತಂಕಗಳನ್ನು ತಂದೊಡ್ಡುತ್ತೆ ಅನ್ನೋದಕ್ಕೆ ಇತ್ತೀಚೆಗಿನ ರಶ್ಮಿಕಾ ಫೇಕ್ ವೀಡಿಯೋ ಅವಾಂತರವೇ ಸಾಕ್ಷಿ. ಅಸಲಿ ಯಾರು ನಕಲಿ ಯಾರು ಅಂತ ಗುರ್ತಿಸೋಕೆ ಆಗದಷ್ಟು ಬದಲಾವಣೆ ಮಾಡುತ್ತೆ ಈ ಎಐ ತಂತ್ರಜ್ಞಾನ.
ಅಂದು ಆ ವಿಡಿಯೋ ನೋಡಿ ಸ್ವತಃ ಅಮಿತಾಭ್ ಬಚ್ಚನ್, ಸಚಿವ ರಾಜೀವ್ ಚಂದ್ರಶೇಖರ್(Rajeev Chandrasekhar) ಸೇರಿದಂತೆ ಹಲವರು ಇದಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ರಶ್ಮಿಕಾ(Rashmika Mandanna) ಕೂಡ ಆತಂಕದಿಂದಲೇ ಈ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದರು. ಈ ವಿಡಿಯೋಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಕಳೆದ ಶುಕ್ರವಾರ ಎಫ್ಐಆರ್(FIr) ದಾಖಲಿಸಿದ್ದಾರೆ. ವಿಶೇಷ ಸೆಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು. ಆದರೂ. ಇದೀಗ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಇದೀಗ ಮತ್ತೊಂದು ಫೇಕ್ ವಿಡಿಯೋ(Deepfake) ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಕಾಣಿಸಿಕೊಂಡ ಹುಡುಗಿ ಲುಕ್ ಕೊಂಚ ರಶ್ಮಿಕಾ ಮಂದಣ್ಣ ಅವರನ್ನೇ ಹೋಲುತ್ತಿದೆ. ಬ್ಲ್ಯಾಕ್ ಡ್ರೆಸ್ ತೊಟ್ಟ ವಿಡಿಯೋದಲ್ಲಿ ರಶ್ಮಿಕಾ ಮುಖವನ್ನು ಬೇರೆ ಹುಡುಗಿಯ ಮುಖವಾಗಿ ಮಾರ್ಫ್ ಮಾಡಲಾಗಿದೆ. ಹೀಗೆ ಮಾಡಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಇದು ದೊಡ್ಡ ಕ್ರೈಂ ಎಂದು ಹೇಳಿದರೂ, ಕಿಡಿಕೇಡಿಗಳು ಮತ್ತೆ ಮತ್ತೆ ಇಂಥಾ ಕೆಲಸ ಮಾಡುತ್ತಲೇ ಇದ್ದಾರೆ.
ಇದನ್ನೂ ವೀಕ್ಷಿಸಿ: ಲೀಕಾಗೋಯ್ತು ರಿಷಬ್ ಶೆಟ್ಟಿ ಕಾಂತಾರಾ 2 ಲುಕ್ ! ಕುತೂಹಲ ಹುಟ್ಟು ಹಾಕಿದ ಅಪ್ಪನ ಕ್ಯಾರೆಕ್ಟರ್!