ಯಾವ ಸ್ಟಾರ್ ದುಬಾರಿ ಬಾಡಿಗಾರ್ಡ್ ಹೊಂದಿದ್ದಾರೆ? : ಸಲ್ಮಾನ್ , ಯಶ್ , ವಿಜಯ್ ಅಲ್ಲ ಮತ್ಯಾರು ಗೊತ್ತಾ?
ಅತಿ ಹೆಚ್ಚು ಸಂಬಳ ಪಡಿಯೋ ಬಾಡಿಗಾರ್ಡ್ ಇವರೆ?
ಶಾರೂಕ್ ಖಾನ್ ಬಾಡಿಗಾರ್ಡ್ ಸಂಭಾವನೆ ದುಬಾರಿ
ತುಂಬಾ ದುಬಾರಿ ಶಾರೂಕ್ ಖಾನ್ ಅಂಗರಕ್ಷಕ
ಒಂದು ಸಿನಿಮಾಗೆ ಕೋಟಿ ಕೋಟಿ ಸಂಭಾವನೆ ಪಡೆಯುವ ಸ್ಟಾರ್‌ಗಳು ದುಬಾರಿ ಹಣ ಕೊಟ್ಟು ಅಂಗರಕ್ಷಕರನ್ನು ನೇಮಿಸಿಕೊಳ್ಳುತ್ತಾರೆ. ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಸಹ ಹೆಚ್ಚು ಸಂಬಳ ಕೊಟ್ಟು ಕಳೆದ 25 ವರ್ಷಗಳಿಂದ ದುಬಾರಿ ಅಂಗರಕ್ಷಕನ್ನು ಇಟ್ಟುಕೊಂಡಿದ್ದಾರೆ. ಹೌದು, ಶೇರ ದುಬಾರಿ ಸಂಬಳ ಪಡೆಯುವ ಅಂಗರಕ್ಷಕರಲ್ಲಿ ಒಬ್ಬರಾಗಿದ್ದಾರೆ. ಮಿ. ಮುಂಬೈ ಪಟ್ಟ ಗಿಟ್ಟಿಸಿಕೊಂಡ ಶೇರ ಮಿ. ಮಹಾರಾಷ್ಟ್ರ ಇವೆಂಟ್‌ನಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದರು. ಪ್ರತಿ ತಿಂಗಳು ಶೇರ 15 ಲಕ್ಷಕ್ಕೂ ಅಧಿಕ ಸಂಬಳ ಪಡೆಯುತ್ತಾರೆ ಎಂದು ವರದಿಗಳಿಂದ ತಿಳಿದುಬಂದಿದೆ. ಅದಂರೆ ಶೇರ ವಾರ್ಷಿಕ ಆದಾಯ 2 ಕೋಟಿಗೂ ಅಧಿಕ ಎನ್ನಲಾಗುತ್ತಿದೆ. ಶಾರುಖ್ ಖಾನ್ ಬಾಡಿಗಾರ್ಡ್ ವರ್ಷಕ್ಕೆ 2.7 ಕೋಟಿ ರು. ವೇತನ ಪಡೆದುಕೊಳ್ಳುತ್ತಿದ್ದು, ಅತಿ ಹೆಚ್ಚು ವೇತನ ಪಡೆದುಕೊಳ್ಳುವ ಬಾಡಿಗಾರ್ಡ್ ಎನಿಸಿಕೊಂಡಿದ್ದಾರೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.
ಇದನ್ನೂ ವೀಕ್ಷಿಸಿ: ಶಾಸಕ ಜನಾರ್ದನ ರೆಡ್ಡಿ, ಪತ್ನಿ ಅರುಣಾ ಲಕ್ಷ್ಮೀಗೆ ಶಾಕ್: ಆಸ್ತಿಗಳ ಅಟ್ಯಾಚ್‌ಗೆ ಕೋರ್ಟ್ ಆದೇಶ