ಮಗನನ್ನು ಅನಾಥನನ್ನಾಗಿಸಿ ಹೋದ ಲೀಲಾವತಿ ! ಮುದ್ದಿನ ಪುತ್ರನಿಗೆ ಕಲಿಸಿದ್ದು ಅದೆಂಥಾ ಸಂಸ್ಕಾರ..?

ಲೀಲಾವತಿ ಮಗ ವಿನೋದ್ ರಾಜ್ ಕೂಡ ತುಂಬಾ ಸೌಮ್ಯ ಸ್ವಭಾವದವರು. ಅಮ್ಮನಿಂದ ಅತ್ಯುತ್ತಮ ಸಂಸ್ಕಾರವನ್ನ ಕಲಿತಿದ್ದಾರೆ.
 

Share this Video
  • FB
  • Linkdin
  • Whatsapp

ಸಿನಿಮಾ ರಂಗದಲ್ಲಿ ಲೀಲಾವತಿ (Leelavathi) ಅವರದ್ದು ದೊಡ್ಡ ಹೆಸರು. ಆದ್ರೆ ಚಿತ್ರರಂಗದ ಯಶಸ್ಸಿನಲ್ಲಿ ಇರುವಾಗೇ ವಿನೋದ್ ರಾಜ್(Vinod Raj) ಅವರ ಜನನವಾಗುತ್ತೆ. ಅಲ್ಲಿಂದ ಅವರ ಬದುಕು ಇನ್ನೊಂದು ರೀತಿಯಲ್ಲಿ ತಿರುವು ತೆಗೆದುಕೊಳ್ಳುತ್ತದೆ. ಚಿತ್ರರಂಗದಲ್ಲಿ ಯಶಸ್ಸಿನ ಹಂತದಲ್ಲಿ ಇರುವಾಗಲೇ ಲೀಲಾವತಿ ತಮ್ಮ ಪುತ್ರ ವಿನೋದ್ ರಾಜ್‌ಗೆ ಜನ್ಮ ನೀಡಿದರು. ಈ ವಿಚಾರ ಬಹಿರಂಗವಾಗುತ್ತಿದ್ದಂತೆಯೇ ಹಲವು ಸಿನಿಮಾ ಅವಕಾಶಗಳಿಂದ ಲೀಲಾವತಿ ವಂಚಿತರಾದರು. ಅದಾಗಲೇ ಖ್ಯಾತಿಯನ್ನ ಗಳಿಸಿದ್ರೂ ಕೂಡ ನಿರ್ದೇಶಕರು ತಮ್ಮ ಸಿನಿಮಾಗೆ ಲೀಲಾವತಿಯವರನ್ನ ಹೆಚ್ಚಾಗಿ ಕರೀತಾ ಇರಲಿಲ್ಲ. ಮಗ ಹುಟ್ಟಿದ ಮೇಲೆ ಬದುಕು ಇನ್ನಷ್ಟು ಕಷ್ಟ ಆಗ್ತಾ ಹೋಯ್ತು. ಆದ್ರೆ ಏನೇ ಇರಲಿ ಈ ಇಬ್ಬರು ತಾಯಿ-ಮಗನ ಬಾಂಧವ್ಯ ಮಾತ್ರ ತುಂಬಾ ಚೆನ್ನಾಗಿ ಇತ್ತು. ಕಷ್ಟ-ನಷ್ಟದಲ್ಲಿ ಅಮ್ಮ ಮಗ ಇಬ್ಬರು ಒಂದಾಗಿ, ಜೀವನವನ್ನು ಸಾಗಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ತೊಟ್ಟಿಲಲ್ಲಿ ಮಗು..ರಂಗದಲ್ಲಿ ಅಮ್ಮ: 5 ದಶಕ..5 ಭಾಷೆಯಲ್ಲಿ ಮಿನುಗಿದ ತಾರೆ..!

Related Video