ತೊಟ್ಟಿಲಲ್ಲಿ ಮಗು..ರಂಗದಲ್ಲಿ ಅಮ್ಮ: 5 ದಶಕ..5 ಭಾಷೆಯಲ್ಲಿ ಮಿನುಗಿದ ತಾರೆ..!
ಬಾಲೆ ಲೀಲಾವತಿಗೆ ಅನ್ನ ಹಾಕಿದ್ದು ಮುಸುರೆ ಪಾತ್ರೆ..!
ಹೇನು ಹೆಕ್ಕಿದ್ರೆ ನಾಲ್ಕಾಣೆ.. ಬದುಕೇ ಸಂಗ್ರಾಮ..!
ಸಮಾಜಮುಖಿ ಬದುಕಿಗೆ ಲೀಲಮ್ಮಾ ಮಾದರಿ..!
ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಲೀಲಾವತಿ(Leelavathi) ವಿಧಿವಶರಾಗಿದ್ದಾರೆ. ಬೆಳ್ತಂಗಡಿಯ ಕಡುಬಡ ಕುಟುಂಬದಲ್ಲಿ ಜನಿಸಿದ ಲೀಲಾವತಿ ಬಾಲ್ಯದಲ್ಲಿ ಅನುಭವಿಸಿದ ಯಾತನೆ, ನೋವು ಅಷ್ಟಿಷ್ಟಲ್ಲ. ಜೀವನದುದ್ದಕ್ಕೂ ಸಂಕಷ್ಟಗಳನ್ನ ಎದುರಿಸುತ್ತಲೇ ಬಂದ ಲೀಲಾವತಿ 600ಕ್ಕೂ ಅಧಿಕ ಸಿನಿಮಾಗಳಲ್ಲಿ(Movies) ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ(Kannada Film industry) ಶುಕ್ರವಾರ ಅನ್ನೋದು ತುಂಬಾನೇ ವಿಶೇಷ. ಬಹುತೇಕ ಎಲ್ಲಾ ಸಿನಿಮಾಗಳೂ ಕೂಡ ತೆರೆ ಮೇಲೆ ಬರೋದು ಶುಕ್ರವಾರದಂದೆ, ಆದ್ರೆ ಕಳೆದ ಶುಕ್ರವಾರ ಮಾತ್ರ ಕನ್ನಡ ಸಿನಿರಂಗಕ್ಕೆ ಕಾರ್ಮೋಡ ಕವಿದಿತ್ತು. ಬರ ಸಿಡಿಲೊಂದು ಅಪ್ಪಳಿಸಿತು. ಕನ್ನಡ ಚಿತ್ರರಂಗದ ಮೇರು ನಟಿ, ಮಹಾನ್ ನಟಿ, ದಿಗ್ಗಜ ನಟಿ ಎಂದೇ ಹೆಸರಾಗಿದ್ದ ಲೀಲಾವತಿ ಅವರು ಇಹಲೋಕದ ಯಾತ್ರೆಯನ್ನ ಮುಗಿಸಿ ಹೋಗಿದ್ರು.ಲೀಲಾವತಿ.. ಕನ್ನಡ ಚಿತ್ರರಂಗ ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗ ಕಂಡ ದಿಗ್ಗಜ ಕಲಾವಿದೆ. ನಟನೆ ಅಂದ್ರೆ ಲೀಲಾವತಿ, ಲೀಲಾವತಿ ಅಂದ್ರೆ ನಟನೆ. ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡೋದು ಅಂತಾರಲ್ಲಾ.. ಹಾಗೆ.. ಲೀಲಾವತಿ ಅಮ್ಮನವರದ್ದು ಸದಾ ಸಹಜ ನಟನೆ. ಸಿನಿಮಾ ಜಗತ್ತಿನಲ್ಲಿ ಸುದೀರ್ಘ 50 ವರ್ಷಗಳ ಕಲಾ ಸೇವೆ ಮಾಡಿದ್ದ ಲೀಲಾವತಿಯವರು ವಯೋಸಹಜ ಕಾಯಿಲೆಯಿಂದ ತಮ್ಮ 86ನೇ ವಯಸ್ಸಿನಲ್ಲಿ ಉಸಿರು ಚೆಲ್ಲಿದ್ದಾರೆ.
ಇದನ್ನೂ ವೀಕ್ಷಿಸಿ: ಕನ್ನಡ ಚಿತ್ರರಂಗದ ದಿಗ್ಗಜ ನಟಿಯ ಯುಗಾಂತ್ಯ ! ಉಸಿರು ನಿಲ್ಲಿಸಿದ ಚಿತ್ರ ರಂಗದ ಮಹಾನ್ ಚೇತನ !