Vikram Ravichandran: 'ತ್ರಿವಿಕ್ರಮ'ನಾಗಿ ಬರ್ತಿದ್ದಾರೆ ಕ್ರೇಜಿ ಸ್ಟಾರ್ ಕೊನೆಯ ಪುತ್ರ!

ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಚಿತ್ರರಂಗದ ಟ್ರೆಂಡ್ ಸೆಟ್ಟರ್. ಈ ಕನಸುಗಾರನ ಮತ್ತೊಂದು ಕೂಸು ಈಗ ಚಿತ್ರರಂಗಕ್ಕೆ ಎಂಟ್ರಿಯಾಗಿದೆ. ರವಿಚಂದ್ರನ್ ಅವರಿಗೆ  ಇಬ್ಬರು ಮುದ್ದಾದ ಗಂಡು ಮಕ್ಕಳು. ಒಬ್ರು ಮನೊರಂಜನ್ ಆದ್ರೆ ಮತ್ತೊಬ್ರು ವಿಕ್ರಂ ರವಿಚಂದ್ರನ್.

Share this Video
  • FB
  • Linkdin
  • Whatsapp

ಕ್ರೇಜಿಸ್ಟಾರ್ ರವಿಚಂದ್ರನ್ (Ravichandran) ಕನ್ನಡ ಚಿತ್ರರಂಗದ (Sandalwood) ಟ್ರೆಂಡ್ ಸೆಟ್ಟರ್. ಈ ಕನಸುಗಾರನ ಮತ್ತೊಂದು ಕೂಸು ಈಗ ಚಿತ್ರರಂಗಕ್ಕೆ ಎಂಟ್ರಿಯಾಗಿದೆ. ರವಿಚಂದ್ರನ್ ಅವರಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳು. ಒಬ್ರು ಮನೊರಂಜನ್ (Manuranjan) ಆದ್ರೆ ಮತ್ತೊಬ್ರು ವಿಕ್ರಂ ರವಿಚಂದ್ರನ್ (Vikram Ravichandran). ವಿಕ್ರಂರನ್ನ ಎಲ್ಲರೂ ಪ್ರೀತಿಯಿಂದ ವಿಕ್ಕಿ ವಿಕ್ಕಿ ಅಂತ ಕರಿತಾರೆ. ವಿಕ್ರಂರದ್ದು ಸಿನಿಮಾಗೆ ಹೇಳಿ ಮಾಡಿಸಿದ ವ್ಯಕ್ತಿತ್ವ. ಡೈನಾಮಿಕ್ ಲುಕ್ಕು. ಕಿಲ್ಲಿಂಗ್ ಸ್ಟೈಲಿರೋ ಹುಡುಗ. ಇದೀಗ ವಿಕ್ರಂ ರವಿಚಂದ್ರನ್ ಬಣ್ಣದ ಜಗತ್ತಿಗೆ ಡೆಬ್ಯೂ ಮಾಡುತ್ತಿರೋ ಮೊದಲ ಸಿನಿಮಾ 'ತ್ರಿವಿಕ್ರಮ' ಬಿಡುಗಡೆಗೆ ಸಿದ್ಧವಾಗಿದೆ. ಕ್ರೇಜಿಸ್ಟಾರ್ ಎರಡನೇ ಸುಪುತ್ರ ವಿಕ್ರಂ ರವಿಚಂದ್ರನ್ ಸಿನಿ ಜರ್ನಿಯ ಮೊದಲ ಹೆಜ್ಜೆ ತ್ರಿವಿಕ್ರಮ ಸಿನಿಮಾ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಡೀ ವರ್ಲ್ಡ್‌ ನಿಮ್ಮ ಮಾರ್ಕೆಟ್‌; ಹೊಂಬಾಳೆ ಫಿಲ್ಮ್ಸ್‌ ಬಗ್ಗೆ ರಕ್ಷಿತ್ ಶೆಟ್ಟಿ ಮಾತು!

ಈ ಸಿನಿಮಾದ ಬಿಡುಗಡೆ ದಿನಾಂಕ ಅನೌನ್ಸ್ ಆಗಿದೆ. ನಟಿ ತಾರಾ ಅನುರಾಧ, ನಟ ಶರಣ್, ಸಾಧುಕೋಕಿಲಾ, ನಿರ್ದೇಶಕ ಸಂತೋಷ್ ಆನಂದ್ ರಾಮ್, ಬಹದ್ದೂರ್ ಚೇತನ್ ಸೇರಿದಂತೆ ಹಲವು ಗಣ್ಯರು ತ್ರಿವಿಕ್ರಮ ಬಿಡುಗಡೆ ದಿನಾಂಕವನ್ನ ಅನೌನ್ಸ್ ಮಾಡಿದ್ದಾರೆ. ಜೂನ್ 24ಕ್ಕೆ ತ್ರಿವಿಕ್ರಮ ಸಿನಿಮಾ ಬೆಳ್ಳಿತೆರೆ ಮೇಲೆ ಬರ್ತಿದೆ. ವಿಕ್ರಂ ಸಿನಿಮಾ ಹೀರೋ ಆಗೋಕು ಮೊದಲೇ ಒಬ್ಬ ಸಿನಿಮಾ ಟೆಕ್ನೀಷಿಯನ್ಸ್ ಆಗಿ ಕೆಲಸ ಮಾಡಿದ್ದಾರೆ. ಅಪ್ಪನ ಕ್ರೇಜಿ ಸ್ಟಾರ್, ಅಪೂರ್ವ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಹಾಗು ಡಿಸ್ಟ್ರಿಬ್ಯೂಷನ್ ನೋಡಿಕೊಂಡಿದ್ದಾರೆ. ಅಣ್ಣ ಮನೊರಂಜನ್ ನಟಿಸಿರೋ ಸಾಹೇಬ ಹಾಗು ಮುಗಿಲ್ ಪೇಟೆ ಸಿನಿಮಾದ ನಿರ್ಮಾಣ ನಿರ್ವಹಣೆಯಲ್ಲೂ ವಿಕ್ಕಿ ಕೆಲಸ ಮಾಡಿದ್ದಾರೆ. ವಿಕ್ರಂ ರವಿಚಂದ್ರನ್ ಅಪ್ಪನ ಲಕ್ಕಿ ಪುತ್ರ ಅಂದ್ರೆ ತಪ್ಪಾಗಲ್ಲ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video