ಧ್ರುವ ಸರ್ಜಾಗೆ ವಿಲನ್ ಆದ್ರಾ ವಿಜಯ್ ಸೇತುಪತಿ ? 'ಕೆಡಿ ದಿ ಡೇವಿಲ್'ಗೆ ತಮಿಳು ನಟನ ಸೇರ್ಪಡೆ?

ಧ್ರುವ ಸರ್ಜಾ ಅಭಿಮಾನಿಗಳಿಗೆ ಇಲ್ಲಿದೆ ಬಿಗ್ ನ್ಯೂಸ್. ಕೆಡಿ ಸಿನಿಮಾದ ಲೇಟೆಸ್ಟ್ ನ್ಯೂಸ್ ಇದು. ನಿರ್ದೇಶಕ ಪ್ರೇಮ್ ಅವರ ಚಿತ್ರ ಕೆಡಿ-ದಿ ಡೆವಿಲ್ ಪ್ರಸ್ತುತ ನಿರ್ಮಾಣ ಹಂತದಲ್ಲಿದೆ. ಕೆಡಿ ಸಿನಿಮಾದ ಹೊಸವರ್ಷದ ಟೀಸರ್ ಬಿಡುಗಡೆ ಆಯಿತು.ಸಾಮಾಜಿಕ ಮಾಧ್ಯಮದಲ್ಲಿ ಟೀಸರ್ ಭಾರೀ ಸದ್ದು ಮಾಡಿತ್ತು.

Share this Video
  • FB
  • Linkdin
  • Whatsapp

ಕೆಡಿ ಪ್ಯಾನ್ ಇಂಡಿಯಾ ಸಿನಿಮಾ. ಬಹುಭಾಷಾ ಚಿತ್ರ 2024 ರಲ್ಲಿ ವಿಶ್ವಾದ್ಯಂತ ಗ್ರ್ಯಾಂಡ್ ರಿಲೀಸ್ ಆಗಲಿದೆ . ಧ್ರುವ ಸರ್ಜಾ(Dhruva Sarja) ಮತ್ತು ಕೆವಿಎನ್ ಪ್ರೊಡಕ್ಷನ್ಸ್‌ನೊಂದಿಗಿನ(KVN Production) ಪ್ರೇಮ್‌ನ ಮೊದಲ ಸಿನಿಮಾವಾಗಿದೆ. ಕೆಡಿ ಸಿನಿಮಾ(KD Movie) ತುಂಬಾ ಸ್ಪೆಷಲ್ ಯಾಕಂದ್ರೆ ಸಿನಿಮಾದ ಕಲಾವಿದರ ದಂಡು ಹಾಗಿದೆ. ಈ ಚಿತ್ರದಲ್ಲಿ ರವಿಚಂದ್ರನ್ ಮತ್ತು ರಮೇಶ್ ಅರವಿಂದ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶಿಲ್ಪಾ ಶೆಟ್ಟಿ ಕನ್ನಡ ಚಿತ್ರರಂಗಕ್ಕೆ ಮತ್ತೆ ಕೆಡಿ ಸಿನಿಮಾದಿಂದ ಮರಳಿದ್ದಾರೆ. ಈ ಚಿತ್ರದಲ್ಲಿ ಸಂಜಯ್ ದತ್ ಕೂಡ ಪ್ರಮುಖ ವಿಲನ್ ಆಗಿ ಅಭಿನಯಿಸಿದ್ದಾರೆ. ಕೆಡಿ ಮತ್ತೊಬ್ಬ ಖಡಕ್ ವಿಲನ್ ಎಂಟ್ರಿಯಾಗುತ್ತಿದ್ದಾರೆಂಬ ಸುದ್ದಿ ಇದೀಗ ಬಾರೀ ಸದ್ದು ಮಾಡುತ್ತಿದೆ. ಅದೇ ಭಾರತದ ನಂ.1 ವಿಲನ್ ವಿಜಯ್ ಸೇತುಪತಿ ಧ್ರುವ ಸಿನಿಮಾಗೆ ಬರುತ್ತಾರೆ ಎನ್ನುವುದಾಗಿದೆ. ಧ್ರುವ ವಿಜಯ್ ಸೇತುಪತಿ(Vijay Sethupathi) ಜೋಡಿ ಒಂದೆ ಸಿನಿಮಾದಲ್ಲಿ ಇರುತ್ತಾರೆಂದರೆ ಸಿನಿಮಾ ಇನ್ನೊಂದು ಲೆವೆಲ್‌ಗೆ ಹೋಗೋದು ಫಿಕ್ಸ್. ಹಾಗಿದ್ರೆ ವಿಜಯ್ ಸೆಥುಪತಿ ಪಾತ್ರವೇನು? ಹೀಗೆ ಕೇಳಿದಾಗ ತಿಳಿದದ್ದುಮೂಲಗಳ ಪ್ರಕಾರ KD ಭಾಗ 1 ರ ಕ್ಲೈಮ್ಯಾಕ್ಸ್‌ನಲ್ಲಿ ಒಂದು ಪಾತ್ರ ನಿರ್ವಗಿಸಲಿದ್ದಾರೆ ಎನ್ನುವುದು. ಹಾಗೆಯೇ ಭಾಗ 2 ರಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಹೇಳಲಾಗುತ್ತಿದೆ. ನಿರ್ದೇಶಕ ಪ್ರೇಮ್, ತಮ್ಮ ವೈವಿಧ್ಯಮಯ ಪಾತ್ರಗಳ ಆಯ್ಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ವಿಜಯ್ ಸೇತುಪತಿ ಅವರನ್ನು ಭೇಟಿ ಮಾಡಿದ್ದರು. ಮೊದಲ ತಮಿಳು ಆವೃತ್ತಿಗೆ ತಮ್ಮ ಧ್ವನಿ ನೀಡಿದ್ದರು. ಕೆಡಿ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದಾರೆ. ಒಟ್ಟಿನಲ್ಲಿ ಧ್ರುವ ಸರ್ಜಾ ಮಾರ್ಟಿನ್ ನಂತರ ಕೆಡಿ ತೆರೆಕಾಣಲಿದ್ದು ಸದ್ಯ ಕೆಡಿ ಸಿನಿಮಾದ ಕೆಲಸಗಳು ಭರದಿಂದ ಸಾಗಿವೆ.

ಇದನ್ನೂ ವೀಕ್ಷಿಸಿ:  Today Horoscope: ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ?

Related Video