'KGF ಚಾಪ್ಟರ್ 1' ಕ್ಲೈಮ್ಯಾಕ್ಸ್ ವಿಡಿಯೋ ವೈರಲ್: ಗರುಡನ ಕೊಂದ ದೃಶ್ಯದ ಶೂಟಿಂಗ್ ಹೇಗಿತ್ತು ಗೊತ್ತಾ?
'KGF ಚಾಪ್ಟರ್1' ಕ್ಲೈಮ್ಯಾಕ್ಸ್ ವೀಡಿಯೋ ವೈರಲ್.!
ಗರುಡನ ಕೊಂದ ದೃಶ್ಯದ ಶೂಟಿಂಗ್ ಹೇಗಿತ್ತು..?
ಗರುಡಾ ರಾಕಿ ಎದುರುರಾದ ಸನ್ನಿವೇಷ ಕ್ಷಣ..!
ಇನ್ನೂ ನಿಂತಿಲ್ಲ ಕೆಜಿಎಫ್ ಚಾಪ್ಟರ್ 01 ಹವಾ.!
ಕೆಜಿಎಫ್ ಚಾಪ್ಟರ್ 1 ಸಿನಿಮಾ ಬಂದು ನಾಲ್ಕುವರೆ ವರ್ಷ ಆಗ್ತಾ ಬಂತು. ಆದ್ರೆ ಈ ಸಿನಿಮಾದ ಬಗ್ಗೆ ಮಾತನಾಡೋದೇ ಇರೋ ದಿನ ಇಲ್ಲ. ಕೆಜಿಎಫ್(KGF 1 ಹವಾ ಇನ್ನೂ ಹೆಚ್ಚಾಗಿದೆ ಅನ್ನೋದಕ್ಕೆ ಜಪಾನ್‌ನಲ್ಲಿ(Japan) ಈ ಸಿನಿಮಾಗೆ ಸಿಕ್ಕ ಗ್ರ್ಯಾಂಡ್ವೆಲ್ಕಮ್ಮೇ ಸಾಕ್ಷಿ. ಇದೀಗ ಕೆಜಿಎಫ್ ಚಾಪ್ಟರ್ ಒನ್ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯದ ಶೂಟಿಂಗ್(Climax Shooting) ಸಂದರ್ಭ ಹೇಗಿತ್ತು ಅಂತ ಹೇಳೋ ವಿಡಿಯೋ ಒಂದು ವೈರಲ್ ಆಗುತ್ತಿದೆ. ಕೆಜಿಎಫ್ ಚಾಪ್ಟರ್ ಒನ್ ಕ್ಲೈಮ್ಯಾಕ್ಸ್‌ನಲ್ಲಿ ರಾಕಿ ಗುರುಡನ ರುಂಡ ಚಂಡಾಡೋ ದೃಶ್ಯದ ಚಿತ್ರೀಕರಣ ಮಾಡುವಾ ಸಂದರ್ಭದ ದೃಸ್ಯ ಇದೆ. ಗರುಡನ ರೋಲ್ ಮಾಡಿದ್ದ ರಾಮಚಂದ್ರ ರಾಜು ಹಾಗು ಯಶ್ ಈ ದೃಶ್ಯದ ಚಿತ್ರೀಕರಣವನ್ನ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದು, ಆ ವಿಡಿಯೋ ಈಗ ಎಲ್ಲೆಡೆ ಹರಿದಾಡ್ತಿದೆ.
ಇದನ್ನೂ ವೀಕ್ಷಿಸಿ: ಸ್ಯಾಂಡಲ್‌ವುಡ್‌ನಲ್ಲಿ ಶುರುವಾಯ್ತು 'ವಾಮನ' ಅಬ್ಬರ: ಅದ್ಧೂರಿ ಕಾರ್ಯಕ್ರಮದಲ್ಲಿ ಟೈಟಲ್ ಸಾಂಗ್ ರಿಲೀಸ್ !