ಸ್ಯಾಂಡಲ್‌ವುಡ್‌ನಲ್ಲಿ ಶುರುವಾಯ್ತು 'ವಾಮನ' ಅಬ್ಬರ: ಅದ್ಧೂರಿ ಕಾರ್ಯಕ್ರಮದಲ್ಲಿ ಟೈಟಲ್ ಸಾಂಗ್ ರಿಲೀಸ್ !

ಸ್ಯಾಂಡಲ್‌ವುಡ್‌ನಲ್ಲಿ ಶುರುವಾಯ್ತು 'ವಾಮನ' ಅಬ್ಬರ.!
ಅದ್ಧೂರಿ ಕಾರ್ಯಕ್ರಮದಲ್ಲಿ ಟೈಟಲ್ ಸಾಂಗ್ ರಿಲೀಸ್!
ಧನ್ವೀರ್ ನಾಯಕನಾಗಿ ನಟಿಸಿರೋ ಸಿನಿಮಾ ವಾಮನ!
ಚೇತನ್ ಗೌಡ ನಿರ್ಮಾಣ, ಚೇತನ್ ಕುಮಾರ್ ನಿರ್ದೇಶನ!

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ನ ಶೋಕ್ದಾರ್ ಧನ್ವಿರ್ ಗೌಡ ( Dhanveer Gowda) ನಟನೆಯ ಆಕ್ಷನ್ ಪ್ಯಾಕೇಜ್ ವಾಮನ(Vamana) ಸಿನಿಮಾ. ಈ ಸಿನಿಮಾ ಪಕ್ಕಾ ಮಾಸ್ ಮಸಾಲ ಅಂತ ಟೀಸರ್ ಹೇಳಿತ್ತು. ಇದೀಗ ವಾಮನ ರಗಡ್ ಸಾಂಗ್ ರಿಲೀಸ್ ಆಗಿದೆ. ವಾ..ವಾ..ವಾ..ವಾಮನ ಅಂತಾ ಬಜಾರ್ ಹುಡ್ಗ ಮಾಸ್ ಎಂಟ್ರಿ ಕೊಟ್ಟಿದ್ದಾರೆ. ಈ ಹಾಡಿನ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿದ್ದು, ನಿರ್ದೇಶಕ ಚೇತನ್ ಕುಮಾರ್ ಬರೆದಿರುವ ಸಾಹಿತ್ಯದ ಹಾಡಿಗೆ ಶಶಾಂಕ್ ಶೇಷಗಿರಿ ಧ್ವನಿಯಾಗಿದ್ದಾರೆ. ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ದಾರೆ. ಇಂಟ್ರಡಕ್ಷನ್ ಹಾಡಿಗೆ(Song) ಧನ್ವೀರ್ ಜಬರ್‌ದಸ್ತ್‌ ಆಗಿ ಹೆಜ್ಜೆ ಹಾಕಿದ್ದಾರೆ. ಈಕ್ವಿನಾಕ್ಸ್ ಗ್ಲೋಬಲ್ ಎಂಟರ್‌ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಚೇತನ್ ಗೌಡ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ವಾಮನನಿಗೆ ರೀಷ್ಮಾ ನಾಣಯ್ಯ ನಾಯಕಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಪವನ್ ಕಲ್ಯಾಣ್ ಅಭಿಮಾನಿಗಳ ಹುಚ್ಚಾಟ: ಬ್ರೋ ಸಿನಿಮಾ ರಿಲೀಸ್ ದಿನ ಅವಾಂತರ

Related Video