
ಉಪೇಂದ್ರ UI ಚಿತ್ರಕ್ಕೆ U/A ಸರ್ಟಿಫಿಕೇಟ್.... ಅರ್ಥವಾದ್ರೆ ಈ ಕಥೆ ಜಗತ್ತೇ ಬದಲಾಗುತ್ತೆ!
ಉಪೇಂದ್ರ ನಿರ್ದೇಶನದ UI ಚಿತ್ರ ಡಿಸೆಂಬರ್ 20 ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಸೋಶಿಯಲ್ ಮೀಡಿಯಾ ಟ್ರೋಲ್‌ಗಳನ್ನು ಒಳಗೊಂಡ ಹಾಡು ಸೆನ್ಸಾರ್ ನಂತರ ಉಳಿಯುತ್ತದೆಯೇ ಎಂಬುದು ಅಭಿಮಾನಿಗಳ ಪ್ರಶ್ನೆ.
ರಿಯಲ್ ಸ್ಟಾರ್ ಉಪೇಂದ್ರ ಫ್ಯಾನ್ಸ್ ನೆಚ್ಚಿನ ದಿನ ಹತ್ತಿರ ಬರ್ತಿದೆ.. ಉಪ್ಪಿ ಲಾಂಗ್ ಗ್ಯಾಪ್ ಬಳಿಕ ಡೈರೆಕ್ಟರ್ ಮಾಡಿರೋ UI ಮೂವಿ ಇದೇ ಡಿ.20ಕ್ಕೆ ರಿಲೀಸ್ ಅಗಲಿದೆ. ಸೆನ್ಸಾರ್ ಮಂಡಳಿಯಿಂದಲೂ ‘UI’ ಫಸ್ಟ್ ರ್ಯಾಂಕ್ನಲ್ಲಿ ಪಾಸ್ ಆಗಿದೆ. ಕರ್ನಾಟಕದಲ್ಲಿ ಥಿಯೇಟರ್ ಲಿಸ್ಟ್ ರೆಡಿಯಾಗಿದೆ. ಎಲ್ಲೆಲ್ಲೂ UIದೇ ಕ್ರೇಜ್..ಇನ್ ಏನಿದ್ರೂ ಪವರ್ಫುಲ್ ‘ಉಪ್ಪಿ’ದೇ ಆರ್ಭಟ. ಈ ಸಿನಿಮಾದ ಟ್ರೋಲ್ ಸಾಂಗ್ ಬಹಳ ಸದ್ದು ಮಾಡಿದ್ದು ಗೊತ್ತೇಯಿದೆ. ಸೋಶಿಯಲ್ ಮೀಡಿಯಾದಲ್ಲಿ ಬಹಳ ಟ್ರೋಲ್ ಆಗಿದ್ದ ವಿಚಾರಗಳನ್ನೆಲ್ಲಾ ಈ ಹಾಡಿನಲ್ಲಿ ಬಿಚ್ಚಿಡಲಾಗಿತ್ತು. ಆದರೆ ಸೆನ್ಸಾರ್ ಬಳಿಕ ಈ ಸಾಂಗ್ ಚಿತ್ರದಲ್ಲಿ ಇರುತ್ತಾ..? ಎನ್ನುವ ಅನುಮಾನ ಹಲವರನ್ನ ಕಾಡ್ತಾ ಇದೆ. ಚಿತ್ರದ ರನ್ಟೈಮ್ 2 ಗಂಟೆ 10 ನಿಮಿಷ ಎನ್ನಲಾಗ್ತಿದ್ದು. ಸಿನಿಮಾ ಬಹಳ ಎಂಗೇಜಿಂಗ್ ಆಗಿ ಇರುವ ಸಾಧ್ಯತೆಯಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ