ಸಿಲ್ವರ್ ಸ್ಕ್ರೀನ್ ಎಂಟ್ರಿಗೆ ರೆಡಿಯಾಗ್ತಿದೆ 'UI': ಎಡಿಟಿಂಗ್ ಟೇಬಲ್‌ನಲ್ಲಿ ಉಪ್ಪಿ ಸಿನಿಮಾ..!
ಸಿಲ್ವರ್ ಸ್ಕ್ರೀನ್ ಎಂಟ್ರಿಗೆ ರೆಡಿಯಾಗ್ತಿದೆ 'UI'
ಕೆ.ಪಿ ಶ್ರೀಕಾಂತ್,ಲಹರಿ ಜಂಟಿಯಾಗಿ ನಿರ್ಮಾಣ!
ಉಪೇಂದ್ರ ನಿರ್ದೇಶನದ ಎಕ್ಸ್ಪೆಕ್ಟೆಡ್ ಚಿತ್ರ 'UI'
ರಿಯಲ್ ಸ್ಟಾರ್ ಉಪೇಂದ್ರ(Upendra) ಅವರ ಅಪ್ಪಟ ಅಭಿಮಾನಿಗಳ ಆಸೆ, ಕನಸು, ನಿರೀಕ್ಷೆ ಈಗ ನಿಜ ಆಗೋ ದಿನ ಹತ್ತಿರ ಬಂದಿದೆ. ಯಾಕಂದ್ರೆ ಉಪೇಂದ್ರ ಅಭಿಮಾನಿಗಳು ದೇವರಲ್ಲಿ ಮಾಡಿದ್ದ ಹರಕೆ ಫಲಿಸಿದೆ. ಇದರ ಫಲವೇ ರಿಯಲ್ ಸ್ಟಾರ್ ಉಪ್ಪಿ ಮತ್ತೆ ಡೈರೆಕ್ಷನ್ ಕ್ಯಾಪ್ ತೊಟ್ಟಿದ್ದು. ಇದೀಗ ಉಪೇಂದ್ರ ನಿರ್ದೇಶನದ ಮತ್ತೊಂದ್ ಹೈ ವೋಲ್ಟೇಜ್ ಮೋಸ್ಟ್ ಎಕ್ಸ್ಪೆಕ್ಟೆಡ್ ಯುಐ ಸಿನಿಮಾದ(UI Cinema) ಸ್ವಿಲ್ವರ್ ಸ್ಕ್ರೀನ್ ಮೇಲೆ ಬರೋದಕ್ಕೆ ರೆಡಿಯಾಗಿದ್ದು, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ(post production work) ಶುರುವಾಗಿದೆ. ಎಡಿಟಿಂಗ್ ಟೇಬಲ್ ಮೇಲೆ ಯುಐ ರಿಂಗಣಿಸುತ್ತಿದೆ. ಉಪೇಂದ್ರ ತನ್ನ ಕನಸಿನ ಸಿನಿಮಾವನ್ನ ಎಡಿಟ್ ಮಾಡುತ್ತಿರೋ ವಿಡಿಯೋಗಳು ವೈರಲ್ ಆಗಿವೆ. ಯುಐ ಸಿನಿಮಾದ ಒಂದು ಹಾಡಿನ ಶೂಟಿಂಗ್ ಮಾತ್ರ ಭಾಕಿ ಇದ್ದು, ಮತ್ತೆಲ್ಲಾ ಕೆಲಸಗಳು ಕಂಪ್ಲೀಟ್ ಆಗಿವೆ. ಅಮೆರಿಕಾ ಟೆಕ್ನೀಷಿಯನ್ಸ್ ಈ ಸಿನಿಮಾಗೆ ವಿಎಫ್ಎಕ್ಸ್ ವರ್ಕ್ ಮಾಡುತ್ತಿದ್ದಾರೆ. ಟೆಕ್ನಿನಿಕಲಿ ತುಂಬಾ ಸ್ಟ್ರಾಂಗ್ ಇರೋ ಈ ಸಿನಿಮಾವನ್ನ ತ್ರಿಡಿ ಬಾಡಿ ಸ್ಕ್ಯಾನ್ ಬಳಸಿ, 200 ಕ್ಯಾಮೆರಾಗಳನ್ನ ಇಟ್ಟುಕೊಂಡು ಶೂಟಿಂಗ್ ಮಾಡಿದ್ದಾರೆ. ಈ ತಂತ್ರಜ್ನಾವ ಏಷ್ಯಾದಲ್ಲೇ ಮೊದಲ ಭಾರಿಗೆ ಯುಐ ಸಿನಿಮಾದಲ್ಲಿ ಬಳಸಿರೋದು ಉಪ್ಪಿಯ ಮತ್ತೊಂದು ಗರಿಮೆ. ಸಲಗ ಖ್ಯಾತಿಯ ಕೆ.ಪಿ ಶ್ರೀಕಾಂತ್ ಹಾಗು ಲಹರಿ ಸಂಸ್ಥೆ ಜಂಟಿಯಾಗಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: ಕಿಚ್ಚ 46 ಸಿನಿಮಾ ಚಿತ್ರೀಕರಣ ಆರಂಭ: ಜನ್ಮದಿನದಂದು ಫ್ಯಾನ್ಸ್ ಭೇಟಿ ಆಗ್ತಾರಂತೆ ಸುದೀಪ್ !