Asianet Suvarna News Asianet Suvarna News

ಫೆಬ್ರವರಿ 3ರಂದು 'ತನುಜಾ' ರಿಲೀಸ್: ಇದು 'ನಮೋ' ಮೆಚ್ಚಿದ ಹುಡುಗಿಯ ಕತೆ

ಫೆಬ್ರವರಿ 3ರಂದು ತನುಜಾ ಸಿನಿಮಾ ಬಿಡುಗಡೆ ಆಗುತ್ತಿದ್ದು, ಸ್ಯಾಂಡಲ್‌ ವುಡ್‌ನಲ್ಲಿ ಭಾರೀ ನಿರೀಕ್ಷೆ ಹುಟ್ಟು ಹಾಕಿದೆ. 
 

ರೈತನ ಮಗಳಾದ ತನುಜಾ ನೀಟ್ ಪರೀಕ್ಷೆ ಬರೆಯಲು ಮಾಡಿದ ಹೋರಾಟ ಮತ್ತು ಅವಳ ಕನಸಿನ ಸುತ್ತ ಈ ಸಿನಿಮಾದ ಕತೆ ಸಿದ್ಧವಾಗಿದೆ. ವಿಶೇಷ ಅಂದ್ರೆ ಪ್ರಧಾನಿ ನರೇಂದ್ರ ಮೋದಿ ಕೂಡ ನೀಟ್ ಪರೀಕ್ಷೆ ಬರೆಯೋಕೆ ವಿದ್ಯಾರ್ಥಿನಿಗೆ ಆದ ಕಷ್ಟದ ಬಗ್ಗೆ ಮಾತನಾಡಿದ್ರು. ಹಳ್ಳಿ ಹುಡುಗಿ ತನುಜಾ ಬೆಂಗಳೂರಿಗೆ ಬಂದು ಎಕ್ಸಾಂ ಬರೆದಿದ್ದನ್ನು ಮೋದಿ ಅಂದು ಕೊಂಡಾಡಿದ್ರು. ಈಗ ತನುಜಾ ಕತೆಗೆ ಸಿನಿಮಾ ರೂಪ ಸಿಕ್ಕಿದೆ. ಆ ಚಿತ್ರಕ್ಕೆ ತನುಜಾ ಅಂತಲೇ ಟೈಟಲ್ ಇಡಲಾಗಿದ್ದು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಸಚಿವ ಡಾ.ಕೆ ಸುಧಾಕರ್ ತನುಜಾ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ರಾಜ್ಯ ಪ್ರಶಸ್ತಿ ವಿಜೇತ ಹರೀಶ್ ಎಂ.ಡಿ ಹಳ್ಳಿ ನಿರ್ದೇಶನದ ನೈಜ ಘಟನೆ ಆಧರಿಸಿದ ಸಿನಿಮಾ ತುನುಜಾ. ಈ ಸಿನಿಮಾದಲ್ಲಿ ತನುಜಾ ಪಾತ್ರದಲ್ಲಿ ಸಪ್ತ ಪಾವೂರು ನಟಿಸಿದ್ದಾರೆ.

Video Top Stories